ಬಾಗಲಕೋಟೆ– ಬಾಗಲಕೋಟೆ ಜಿಲ್ಲೆಯಲ್ಲಿ ಮಹಾ ಮಾರಿ ಕರೋನಾ ಸೊಂಕು ಶಾಲೆಯಲ್ಲಿ ಪಾಠ ಮಾಡಿದ್ದ ಶಿಕ್ಷರಿಗೆ ಬಂದಿದೆ. ಹೀಗಾಗಿ ಶಿಕ್ಷಕರು ಮತ್ತು ಪೋಷಕರಲ್ಲಿ ಆತಂಕ ಮೂಡಿದೆ. ರಾಜ್ಯ ಸರ್ಕಾರ ಶಾಲೆ ಆರಂಭ ಮಾಡುವ ಮುನ್ನವೇ ಎಲ್ಲಾ ಶಿಕ್ಷಕರ ಕೊವೀಡ್ ಟೆಸ್ಟ್ ಮಾಡಿಸುವುದನ್ನು ಕಡ್ಡಾಯ ಮಾಡಿತ್ತು ಹೀಗಾಗಿ ಬಹುತೇಕ ಶಿಕ್ಷಕರು ಕೊವೀಡ್ ವರದಿ ಬಂದಿದ್ದು ರಾಜ್ಯದಲ್ಲಿ ಬಹುತೇಕ ಜಿಲ್ಲೆಯಲ್ಲಿನ ಶಿಕ್ಷಕರಿಗೆ ಕರೋನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಇನ್ನು ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ, ಮುಧೋಳ, ಜಮಖಂಡಿ, ಬೀಳಗಿ ತಾಲೂಕಿನ 5 ಜನ ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.. ಈ ಹಿನ್ನೆಲೆ ಜ. 1ರಿಂದ ಈ ಶಿಕ್ಷಕರು ಶಾಲೆಗೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಶಾಲೆ ಸೇರಿದಂತೆ 15,000 ಜನ ಶಿಕ್ಷಕರ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಕರೋನ ದೃಢಪಟ್ಟಿರುವ ಶಿಕ್ಷಕರು ಶಾಲೆಗೆ ಬಂದು ಪಾಠ ಮಾಡಿಲ್ಲಾ. ರೋಗ ಲಕ್ಷಣ  ಅರಿತಿದ್ದ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆದಿದ್ದಾರೆ.

About Author

Priya Bot

Leave A Reply