ಬಳ್ಳಾರಿ – ಕೊರೋನ ಎರಡನೇ ಅಲೆಯಲ್ಲಿ ಅದು ಯಾಕೋ ಕರೋನಾ ಹೆಮ್ಮಾರಿಯ ವಕೃ ದೃಷ್ಠಿ ಮಕ್ಕಳ ಮೇಲೆ ಬಿದ್ದಿದೆ. ಅವಿಭಜಿತ ಗಣಿ ನಾಡು ಬಳ್ಳಾರಿ  ಜಿಲ್ಲೆಯಲ್ಲಿ 18 ವರ್ಷದ ಒಳಗಿನ ಮಕ್ಕಳಲ್ಲಿ ಕೊರೋನ ಆತಂಕ ಹೆಚ್ಚಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ ಸುಮಾರು 3000 ಕ್ಕೂ ಅಧಿಕ ಮಕ್ಕಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಅವಿಭಜಿತ ಜಿಲ್ಲೆಯಲ್ಲಿ 3000 ಮಕ್ಕಳಿಗೆ ಕೊರೋನ ಅಟ್ಯಾಕ್ ಆಗಿದ್ದು, ಮೂರನೇ ಅಲೆ ಆರಂಭಕ್ಕೂ ಮುನ್ನವೇ, ಮಕ್ಕಳಲ್ಲಿ ಕೊರೋನ ಸೋಂಕು ಹೆಚ್ಚಳವಾಗಿದೆ.

ಇದರಲ್ಲಿ 3000 ಸಾವಿರಾರ ಸೋಂಕಿತ ಮಕ್ಕಳಲ್ಲಿ ಬಹುತೇಕರು ವಿಧ್ಯಾರ್ಥಿಗಳೆ ಆಗುದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇನ್ನು ಜಿಲ್ಲೆಯಲ್ಲಿ ಈ ವರೆಗೆ 2200 ಮಕ್ಕಳು ಗುಣಮುಖರಾಗಿ ಆಸ್ಪತ್ರೆಯಿಂದಾ ಡಿಸ್ಚಾರ್ಜ್ ಆಗಿದ್ದು ಪ್ರಸ್ತುತ 800 ಮಕ್ಕಳು  ಕೋವಿಡ್ ಚಿಕಿತ್ಸೆ ಪಡೆಯುತಿದ್ದಾರೆ. ನಿರಾತಂಕದ ವಿಷಯ ಅಂದರೆ, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಕ್ಕಳು ಕೋವಿಡ್‌ಗೆ  ಬಲಿಯಾಗಿದ್ದಾರೆ.

ಮೂರು ಸಾವಿರ ಮಕ್ಕಳಲ್ಲಿ ಕೇವಲ ಇಬ್ಬರು ಮಾತ್ರ ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಎರಡನೇ ಅಲೆ ನೀಡಿದ ಹೊಡೆತ ಮಾಸುವ ಮುನ್ನವೇ ಮೂರನೇ ಅಲೆ ಮಕ್ಕಳಿಗೆ ಹೆಚ್ಚಾಗಿ ಸೋಂಕು ತಗಲುವ ಲಕ್ಷಣಗಳಿದ್ದು, ಮೂರನೇ ಅಲೆ ಆರಂಭಕ್ಕೂ ಮುನ್ನ ಗಣಿ ನಾಡು ಬಳ್ಳಾರಿಯಲ್ಲಿ ಮಕ್ಕಳಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply