ಹಾವೇರಿ- ಮೇ.20 ರಂದು ಗುರುವಾರ ಜಿಲ್ಲೆಯಲ್ಲಿ ಕೊರೋನಾ ಅಬ್ಬರ ಮತ್ತೆ ಅಬ್ಬರಿಸಿದ್ದು ಕೊರೋನಾ ಸೋಂಕಿನಿಂದ ಬರೋಬ್ಬರಿ 8 ಜನರು ಮರಣ ಹೊಂದಿದ್ದಾರೆ. 321 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ದೃಢಪಡಿಸಲಾಗಿದೆ.

ಶಿಗ್ಗಾವಿ ತಾಲೂಕಿನಲ್ಲಿ 4ಜನರು, ಬ್ಯಾಡಗಿ ತಾಲೂಕಿನಲ್ಲಿ -2, ಹಾನಗಲ್ಲ-1, ಹಿರೇಕೆರೂರು-1 ಸೇರಿ ಜಿಲ್ಲೆಯಲ್ಲಿ
ಒಟ್ಟು 8 ಜನರು ಮೃತಪಟ್ಟಿದ್ದಾರೆ. ಸದರಿಯವರು ಅಂತ್ಯಕ್ರಿಯೆಯನ್ನು ಕೋವಿಡ್-19 ನಿಯಮಾವಳಿಯ ಪ್ರಕಾರ ಕೈಗೊಳ್ಳಲಾಗಿದೆ.
ಮೇ 20 ರಂದು ಬ್ಯಾಡಗಿ-35, ಹಾನಗಲ್ಲ-32, ಹಾವೇರಿ-89, ಹಿರೇಕೆರೂರು-59, ರಾಣೇಬೆನ್ನೂರು-44, ಸವಣೂರು-30, ಶಿಗ್ಗಾವ-29, ಇತರೆ -3, ಒಟ್ಟು ಜಿಲ್ಲೆಯಲ್ಲಿ 321 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ 17365 ಪ್ರಕರಣಗಳಿವೆ. ಕೋವಿಡ್ ಪಾಸಿಟಿವ ಪ್ರಕರಣಗಳಲ್ಲಿ 15331 ಜನರು ಗುಣಮುಖರಾಗಿದ್ದಾರೆ. ಮೇ. 20 ರಂದು 193 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಗುರುವಾರ ದೃಢಪಡಿಸಲಾದ 8 ಜನರ ಮರಣ ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 371 ಜನರು ಕೊರೋನಾ ರೋಗಕ್ಕೆ ಮೃತಪಟ್ಟಿದ್ದಾರೆ.

images-53.jpeg

Email

Basavaraj Pujar

About Author

Basavaraj Pujar

Leave A Reply