ಬಾಗಲಕೋಟೆ-ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಜಮಖಂಡಿ ಉಪ ವಿಭಾಗ ವ್ಯಾಪ್ತಿಯ 4 ತಾಲೂಕು ಹಾಗೂ ಎರಡನೇ ಹಂತದಲ್ಲಿ ಬಾಗಲಕೋಟೆ ಉಪವಿಭಾಗ ವ್ಯಾಪ್ತಿಯ 5 ತಾಲೂಕುಗಳ ಒಟ್ಟು 191 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಗಳ ಮತ ಎಣಿಕೆ ಕಾರ್ಯವು ಬುಧವಾರ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆಯಿತು.

ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಿಸಲಾಗಿತ್ತು. ಮತ ಎಣಿಕೆಗೂ ಮುನ್ನ ಅಭ್ಯರ್ಥಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸ್ಟ್ರಾಂಗ್‍ರೂಮ್‍ನ್ನು ನಿಯಮಾನುಸಾರ ತೆರೆದು, ಮತ ಎಣಿಕೆಗೆ ಚಾಲನೆ ನೀಡಲಾಯಿತು.  ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಸಿಬ್ಬಂದಿಗಳು, ಅಭ್ಯರ್ಥಿಗಳು ಮತ್ತು ಏಜೆಂಟರನ್ನು ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನ್ ಮಾಡಲಾಯಿತು.

ಪ್ರತಿ ಸುತ್ತಿನ ಎಣಿಕೆಗೆ ಅಭ್ಯರ್ಥಿಗಳ ಪರ ಏಜೆಂಟರಗಳನ್ನು ಧ್ವನಿ ವರ್ಧಕಗಳ ಮೂಲಕ ಕರೆಯಲಾಗುತ್ತಿತ್ತು. ಎಣಿಕೆ ಕೇಂದ್ರದಲ್ಲಿ ಏಜೆಂಟರುಗಳಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿತ್ತು. ಮತ ಎಣಿಕಾ ಕೇಂದ್ರಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144 ಸೆಕ್ಷನ್ ರನ್ವಯ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿತ್ತು. ಪೆÇಲೀಸ್ ಇಲಾಖೆ ವತಿಯಿಂದ ಮತ ಎಣಿಕಾ ಕೇಂದ್ರಗಳ ಸುತ್ತಮುತ್ತ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲೆಯ ಒಟ್ಟು 9 ತಾಲೂಕುಗಳ 191 ಗ್ರಾಮ ಪಂಚಾಯತಿಗಳ 1115 ಕ್ಷೇತ್ರಗಳ ಪೈಕಿ 757 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. ಜಮಖಂಡಿ ತಾಲೂಕಿನ 169 ಕ್ಷೇತ್ರಗಳ ಪೈಕಿ 109 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿವೆ. ಮುಧೋಳ ತಾಲೂಕಿನಲ್ಲಿ 130 ಕ್ಷೇತ್ರಗಳ ಪೈಕಿ 94 ಕ್ಷೇತ್ರ, ಬೀಳಗಿ ತಾಲೂಕಿನ 128 ಕ್ಷೇತ್ರಗಳ ಪೈಕಿ 91 ಕ್ಷೇತ್ರ, ರಬಕವಿ-ಬನಹಟ್ಟಿ ತಾಲೂಕಿನ 98 ಕ್ಷೇತ್ರಗಳ ಪೈಕಿ 75 ಕ್ಷೇತ್ರ, ಬಾಗಲಕೋಟೆ ತಾಲೂಕಿನ 152 ಕ್ಷೇತ್ರಗಳ ಪೈಕಿ 119 ಕ್ಷೇತ್ರ, ಹುನಗುಂದ ತಾಲೂಕಿನ 89 ಕ್ಷೇತ್ರಗಳ ಪೈಕಿ 53 ಕ್ಷೇತ್ರ, ಬಾದಾಮಿ ತಾಲೂಕಿನ 186 ಕ್ಷೇತ್ರಗಳ ಪೈಕಿ 81 ಕ್ಷೇತ್ರ, ಇಲಕಲ್ಲ ತಾಲೂಕಿನ 109 ಕ್ಷೇತ್ರಗಳ ಪೈಕಿ 104 ಹಾಗೂ ಗುಳೇದಗುಡ್ಡ ತಾಲೂಕಿನ 59 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ.

ಜಿಲ್ಲೆಯ ಬಾಗಲಕೋಟೆ, ಹುನಗುಂದ, ಇಲಕಲ್ಲ, ಬಾದಾಮಿ, ಮುಧೋಳ, ಬೀಳಗಿ, ಜಮಖಂಡಿ, ರಬಕವಿ-ಬನಹಟ್ಟಿಯಲ್ಲಿ ಸ್ಥಾಪಿಸಲಾದ ಮತ ಎಣಿಕೆ ಕೇಂದ್ರಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಭೇಟಿ ನೀಡಿ ಮತ ಎಣಿಕೆ ಕಾರ್ಯವನ್ನು ಪರಿಶೀಲಿಸಿದರು. ಬಾಗಲಕೋಟೆ ಜಿಲ್ಲಾ ಚುನಾವಣಾ ವೀಕ್ಷಕರಾದ ಶಶಿಧರ ಕುರೇರ ಕೂಡ ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

About Author

Priya Bot

Leave A Reply