ಪ್ರೇಮ ವಿವಾಹವಾದ ನಾಲ್ಕು ತಿಂಗಳಲ್ಲಿ ದಂಪತಿ ನೇಣಿಗೆ ಶರಣು!

0

ಬೆಂಗಳೂರು –  ಹೆತ್ತವರ ವಿರೋಧ ಲೆಕ್ಕಿಸದೆ ನಾಲ್ಕು ತಿಂಗಳ ಹಿಂದೆ ತನ್ನನ್ನು ವರಿಸಿದ್ದ ಪತ್ನಿ ನೇಣಿಗೆ ಶರಣಾದ ಕೆಲವೇ ನಿಮಿಷದಲ್ಲಿ ಆಕೆಯ ಪತಿಯೂ ಆತ್ಮಹತ್ಯೆಗೆ  ಶರಣಾಗಿರುವ ಮನಕಲಕುವ ಘಟನೆ ಶುಕ್ರವಾರ ಸಂಜೆ ಹೇರೋಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಹರ್ಷಿತಾ (19) ಹಾಗೂ ಪುನೀತ್ (21) ಎಂದು ಗುರುತಿಸಲಾಗಿದೆ. ವಿಷಯ ತಿಳಿದ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

ಪೊಲೀಸರಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ದಂಪತಿಗಳು ಮಾಗಡಿ ತಾಲೂಕಿನ ಚನ್ನೇನಹಳ್ಳಿ ಗ್ರಾಮದವರು. ಪುನೀತ್ ಹಾಗೂ ಹರ್ಷಿತಾ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮನೆಯಲ್ಲೂ ಪೋಷಕರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ನಾಲ್ಕು ತಿಂಗಳ ಹಿಂದೆ ಪೋಷಕರ ವಿರೋಧದ ಮಧ್ಯೆಯೂ ಮದುವೆ ಆಗಿ, ಹೇರೋಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪುನೀತ್ ಜೀವನ ನಿರ್ವಹಣೆಗಾಗಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ.ಸಂಜೆ 4 ರ ಸುಮಾರಿಗೆ ಹರ್ಷಿತಾ ನೇಣು ಬಿಗಿದುಕೊಂಡಿದ್ದನ್ನು ಗಮನಿಸಿದ ಪುನೀತ್ ಆಕೆಯನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾನೆ.

ಚಿಕಿತ್ಸೆ ಫಲಿಸದೆ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದಿದ್ದಾಳೆ. ತಕ್ಷಣ ತನ್ನ ಬಾಡಿಗೆ ಮನೆಗೆ ತೆರಳಿದ ಪುನೀತ್ ಸಹ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ. ಹರ್ಷಿತಾ ಬರೆದಿದ್ದ ಸುಸೈಡ್ ನೋಟ್ ಅಲ್ಲಿ ಹೆತ್ತವರ ವಿರೋಧ ಹಾಗೂ ತೊಂದರೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ದಾಖಲಿಸಿದ್ದಾಳೆ. ಪ್ರಕರಣದ ತನಿಖೆ ಮುಂದುವರೆದಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply