ಕೋವಿಡ್ ಪಾಸಿಟಿವ್ ಸುಳ್ಳು ವರದಿ ಅಧಿಕಾರಿ ಅಮಾನತು

0

ಬಳ್ಳಾರಿ

ಕೋವಿಡ್ ಪಾಸಿಟಿವ್ ಸುಳ್ಳು ವರದಿ ನೀಡಿದ ಬಳ್ಳಾರಿ ಜಿಲ್ಲೆಯ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಲ್ಯಾಬ್ ಟೆಕ್ನಿಷಿಯನ್ ಕೆ ಪಾಂಡುರಂಗ ಅವರನ್ನು ಅಮಾನತ್ತು ಮಾಡಿ ಎಂದು  ಜಿಲ್ಲಾ ಆರೋಗ್ಯ ಅಧಿಕಾರಿ ಜನಾರ್ಧನ್ ಅವರು ಆದೇಶ ಮಾಡಿದ್ದಾರೆ. ‌

ಬಳ್ಳಾರಿ ಜಿಲ್ಲೆಯ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಪಾಂಡುರಂಗ ಅವರು ಎರಡು ತಿಂಗಳುಗಳ ಹಿಂದೆ ಮೇ 19ರಂದು ಸಾಮಾನ್ಯ ಮರಣ ಹೊಂದಿದ ಮಹಿಳೆಯೊಬ್ಬರ ಕುರಿತು ಜು.17ರಂದು ಕೋವಿಡ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ ಎಂದು ಸುಳ್ಳು ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ ಪಾಂಡುರಂಗ ಅವರನ್ನು ಕೆಲಸದಿಂದ ಅಮಾನತ್ತು ಮಾಡಿದ್ದಾರೆ.

ಕುರುಗೋಡು ತಾಲೂಕಿನ ಕ್ಯಾದಿಗೆ ಹಾಳ ಗ್ರಾಮದ  ಹೆಚ್. ಶಂಕ್ರಮ್ಮ ಅವರದು ಸಹಜವಾಗಿ ಸಾವಾಗಿರುತ್ತೆ. ಆದ್ರೆ ಅವರ  ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಸುಳ್ಳು ವರದಿಯನ್ನು ಕೆ ಪಾಂಡುರಂಗ್ ಅವರು  ನೀಡಿರುತ್ತಾರೆ. ಈ ಹಿನ್ನೆಲೆ ಅವರನ್ನು ಅಮಾನತ್ತು ಮಾಡಲಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply