ಬಳ್ಳಾರಿ- ಕರೋನಾ ಮಾಹಾ ಮಾರಿಯ ಎರಡನೇ ಅಲೆಗೆ ಬಹುತೇಕ ರಾಜ್ಯಗಳು ತತ್ತರಿಸಿವೆ. ಈ ಮದ್ಯದಲ್ಲಿ ರಾಜ್ಯದಲ್ಲಿ ಅದರ ಕರಿ ನೆರಳು ಬೀಳದಂತೆ ಸರ್ಕಾರ ಮುಂಜಾಗ್ರತೆ ವಹಿಸಿಕೊಂಡಿದೆ. ಈಗಾಗಲೇ ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಬರುವ ಎಲ್ಲಾ ಪ್ರಯಾಣಿಕರ ತಪಾಸಣೆ ಮಾಡಲು ಸರ್ಕಾರ ಮು‌ದಾಗಿದೆ. ಇನ್ನು ಕಳೆದ ವರ್ಷದ ಆರಂಭದಲ್ಲಿ ಒಕ್ಕರಿಸಿದ ಕರೋನಾ ಹೆಮ್ಮಾರಿಗೆ ಗಣಿ ನಾಡು ಬಳ್ಳಾರಿ ಜಿಲ್ಲೆ ತತ್ತರಿಸಿತ್ತು. ಆದ್ರೆ ಈ ವರ್ಷ ಕರೋನಾ ಕರಿ ನೆರಳು ಜಿಲ್ಲೆಯ ಮೇಲೆ ಬೀಳದಹಾಗೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆನಂದ್ ಸಿಂಗ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಂದಾಲ್ ಗೆ ಬರುವ ಬೇರೆ ರಾಜ್ಯದ ನೌಕರರು ಕಡ್ಡಾಯವಾಗಿ ಕೋವಿಡ್ ರಿಪೋರ್ಟ್ ಇರಲೇಬೇಕು ಎಂದಿದ್ದಾರೆ. ‌ಅದರಲ್ಲೂ ತಮಿಳುನಾಡು ಮಹಾರಾಷ್ಟ್ರದ ನೌಕರರು ಜಿಂದಾಲ್ ಗೆ ಬರಬೇಕಾದರೆ ಕೋವಿಡ್ ರಿಪೋರ್ಟ್ ಇರಲೇಬೇಕು ಎಂದಿದ್ದಾರೆ. 

 

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply