ಕೋವಿಡ್ ನಿಯಮ ಉಲ್ಲಂಘನೆ:ಹಲವು ಅಂಗಡಿಗಳ ಪರವಾನಗಿ ರದ್ದು.

0

ಮಂಗಳೂರು- ಕರೋನಾ ಎರಡನೇ ಅಲೆಯ ಅಂತ್ಯಕ್ಕೆ ರಾಜ್ಯದ ನಾನಾ ಜಿಲ್ಲೆಗಳು ಬಂದಿದ್ದು‌. ಬಹುತೇಕ ಜಿಲ್ಲೆಯಲ್ಲಿ ಕರೋನಾ ಸೋಂಕಿನ ಪ್ರಮಾಣ ಇಳಿಕೆ ಕಂಡಿದೆ. ಇದನ್ನೆ ಲಾಭ ಪಡೆದ ಮಂಗಳೂರು ನಗರದಲ್ಲಿ ಹಲವಾರು ಅಂಗಡಿ ಮುಂಗಟ್ಟುಗಳು ಓಪನ್ ಆಗಿದ್ದು, ಹೀಗಾಗಿ ಅಂಗಡಿ ಮುಂಗಟ್ಟು ಓಪನ್ ಮಾಡಿದವರುಗೆ ಮಂಗಳೂರು ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಕೊರೋನಾ‌ ನಿಯಮ‌ ಉಲ್ಲಂಘನೆ ಮಾಡಿದ ಹಲವು ಅಂಗಡಿಗಳ ಪರವಾನಗಿ ರದ್ದು‌ ಮಾಡಿ‌ ಬೀಗ ಜಡಿಯಲಾಗಿದೆ. ಇದರ ಜೊತೆಯಲ್ಲಿ ಸಾವಿರಾರು ರೂಪಾಯಿ‌ ದಂಡ ವಿಧಿಸಲಾಗಿದೆ.  

ಲಾಕ್ ಡೌನ್ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲಾಡಳಿತ  ಬೆಳ್ಳಗೆ 6 ರಿಂದ 10 ಗಂಟೆಯವರೆಗೆ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಬಹುತೇಕ ವ್ಯಾಪಾರಿಗಳು ಕರೋನಾ ರೂಲ್ಸ್ ಬ್ರೆಕ್ ಮಾಡಿ ಅಂಗಡಿ‌ ಮುಂಗಟ್ಟು ಓಪನ್ ಮಾಡಿದ್ದಾರೆ.  ಅಂಗಡಿಗಳನ್ನು ಅನಧಿಕೃತವಾಗಿ ತೆರೆದು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ  ಪಾಲಿಕೆಯಿಂದ ವಿವಿಧ ತಂಡಗಳ ಮೂಲಕ ನಡೆಸಲಾದ ಕಾರ್ಯಾಚರಣೆಯ ವೇಳೆ ಕೋವಿಡ್ 19 ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 78  ಅಂಗಡಿಗಳಿಗೆ ರೂ. 68,350/- ದಂಡ ವಿಧಿಸಿ ಈ ಪೈಕಿ 30 ಅಂಗಡಿಗಳ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿದ್ದಾರೆ. ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

 

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply