ಬಳ್ಳಾರಿ ಗಣಿನಾಡು ಬಳ್ಳಾರಿ ಜಿಲ್ಲೆಗೆ 2021ರ ಜನವರಿ ಮೊದಲ ವಾರದಲ್ಲೇ ಕೋವಿಡ್ ವ್ಯಾಕ್ಸಿನ್ ಬರಲಿದ್ದು, ಆ ವ್ಯಾಕ್ಸಿನ್ ಸಂಗ್ರಹಣೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಕಲ ತಯಾರಿ ನಡೆಸಿಕೊಂಡಿದೆ. ಜನವರಿ ಮೊದಲ ವಾರದಲ್ಲೇ ಈ ವಾಕ್ಸಿನ್ ಬರುವ ಸಾಧ್ಯತೆ ಇದ್ದು, ವ್ಯಾಕ್ಸಿನ್ ಸಂಗ್ರಹಣೆಗಾಗಿ ಸೂಕ್ತ ಜಾಗೆಯನ್ನೂ ಕೂಡ ನಿಗದಿಪಡಿಸಿಕೊಂಡಿದೆ. ಆದರೆ, ಎಷ್ಟು ಪ್ರಮಾಣದ ವ್ಯಾಕ್ಸಿನ್ ಅನ್ನ ಗಣಿಜಿಲ್ಲೆಗೆ ಕಳಿಸಿ ಕೊಡಲಾಗುತ್ತೆ ಎಂಬುದರ ಕುರಿತು ಡಬ್ಲ್ಯುಹೆಚ್ ಓ ಸ್ಪಷ್ಟನೆ ನೀಡಿಲ್ಲ. ವ್ಯಾಕ್ಸಿನ್ ಸಂಗ್ರಹಣೆಗಾಗಿ ಸಕಲ ತಯಾರಿ ಮಾಡಿ ಕೊಂಡಿದ್ದೇವೆ ಎಂದು ಡಿಹೆಚ್ ಒ ಡಾ.ಹೆಚ್.ಎಲ್. ಜನಾರ್ದನ ತಿಳಿಸಿದ್ದಾರೆ. ಅಂತೂ, ಇಂತೂ ಈ ಮಹಾಮಾರಿ ಕೋವಿಡ್ ನಿಯಂತ್ರಣಕ್ಕೆ ಸತತ ಒಂದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಶ್ರಮಿಸಿದ್ದು, ಇನ್ನೇನು ಕೋವಿಡ್ ಸೋಂಕಿಗೆ ಸೂಕ್ತ ವ್ಯಾಕ್ಸಿನ್ ಬರುವ ನಿರೀಕ್ಷೆಯಲ್ಲಿದ್ದು, ಈಗ ಕೋವಿಡ್ ಸೋಂಕಿನ ಭಯಭೀತಿವುಳ್ಳವರು ನಿಟ್ಟುಸಿರು ಬಿಡುವಂತಾಗಿದೆ.

About Author

Priya Bot

Leave A Reply