ಕೊಟ್ಟೂರು: ಎಲ್ಲಾ ಗುತ್ತಿಗೆದಾರರಿಂದ ಕಮಿಷನ್ ಪಡೆದುಕೊಂಡಿರುವ ಹಾಲಿ ಶಾಸಕರು ತಮ್ಮ ಸ್ವಂತ ಹಣದಿಂದ 2 ಕೋಟಿ ಕ್ಷೇತ್ರದ ಅಭಿವೃದ್ಧಿಗೆ ನೀಡಿದರೆ ನಾನು ಸಹ ವೈಷ್ಣವಿ ಕೋಳಿ ಫಾರಂ ನಿಂದ ಒಂದು ಕೋಟಿ ಹಣ ನೀಡುತ್ತೇನೆ ಎಂದು ಮಾಜಿಶಾಸಕ ನೇಮಿರಾಜ್ ನಾಯಕ್ ಹಾಲಿ ಶಾಸಕ ಭೀಮಾನಾಯ್ಕ ಗೆ ತಿರುಗೇಟು ನೀಡಿದ್ದಾರೆ.

ಬುಧವಾರ ಪಟ್ಟಣದ ಮರಿ ಕೊಟ್ಟರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಿಜೆಪಿ ಪಕ್ಷದಿಂದ ಶ್ರಮಿಕರಿಗೆ ಒಂದು ನಮನ ಆಟೋ ಚಾಲಕರಿಗೆ ಆಹಾರ ಕಿಟ್ ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಮತದಾರರು ನಾನಾ ಸಮಸ್ಯೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಕೊಳ್ಳುವ ಬದಲು ನೆಟ್ಟಗೆ ಅಭಿವೃದ್ಧಿ ಕೆಲಸಗಳನ್ನು ಮಾಡುವ ಯೋಗ್ಯತೆ ಇಲ್ಲದವರು ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.

ಈ ದೇಶದ ಪ್ರಜೆಗಳ ಆರೋಗ್ಯ ಮತ್ತು ಸುಭದ್ರತೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಸಿಕೆ ಕೊಟ್ಟು ಜನರ ಜೀವ ಉಳಿಸುತ್ತಿದ್ದಾರೆ ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಮುಖ್ಯಮಂತ್ರಿಗಳು ತಲಾ ಒಂದು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಈ ಕೆಲಸಗಳನ್ನು ಹರಿಯದ ಗುತ್ತಿಗೆದಾರರ ತಲೆ ಬೋಳಿಸುವ ಅವಿವೇಕಿಗಳಿಗೆ ಏನು ಗೊತ್ತು ಎಂದು ಗರಂ ಹೇಳಿದರು.

ಕೊಟ್ಟೂರು ತಾಲೂಕಿನ ಚಿರಿಬಿ ಮತ್ತು ಗಂಗಮ್ಮನಹಳ್ಳಿ ಯ ರಸ್ತೆ ಹದಗೆಟ್ಟು 10 ವರ್ಷ ಕಳೆದಿವೆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತಾನು ಗ್ರಾಮೀಣ ಭಾಗದ ರಸ್ತೆಗಳನ್ನು ಸರಿಪಡಿಸುವ ಆಲೋಚನೆ ಮಾಡಿ ನಂತರ ತನ್ನನ್ನು ತಾನು ಅಭಿವೃದ್ಧಿ ಹರಿಕಾರ ಎಂದು ಹೊಗಳಿ ಕೊಳ್ಳಲಿ ಎಂದು ವೆಂಗ್ಯವಾಗಿ ಮಾತನಾಡಿದರು.

ಎರಡು ಬಾರಿ ತಿರಸ್ಕಾರಗೊಂಡ ನಾನು ಎಷ್ಟು ಬಾರಿ ಸೋತರೂ ಜನರ ಸೇವೆಗಾಗಿ ನನ್ನ ಜೀವನ ಮುಡಿಪಾಗಿಡುವೆ ಜೊತೆಗೆ ಪಕ್ಷದ ಕಾರ್ಯಕರ್ತರ ಸಹಕಾರದಿಂದ ಸಂಕಷ್ಟ ಅನುಭವಿಸುತ್ತಿರುವ ಬಡಜನರಿಗೆ ಮತ್ತು ಆಟೋ ಚಾಲಕರಿಗೆ 3 ಸಾವಿರ ಆಹಾರ ಕೀಟಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.

IMG_20210616_121435-1.jpg

Email

Huligesh Tegginakeri

About Author

Huligesh Tegginakeri

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಕಳೆದ ಎಂಟು ವರ್ಷಗಳ ಕಾಲ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದೇನೆ.. ವಿಶೇಷ, ವಿಭಿನ್ನ ರೀತಿಯ ಸುದ್ದಿಗಳನ್ನು ಕಲೆಹಾಕಿ ಬರೆಯುವುದೇ ನನ್ನ ಹವ್ಯಾಸ..

Leave A Reply