ಮುಂಬೈ- ಕನ್ನಡದ ರಕ್ಷಿತ್ ಶೆಟ್ಟಿ ಜೊತಗಿನ ಕಿರಿಕ್ ಪಾರ್ಟಿ ಮೂಲಕ ಕನ್ನಡ ಸಿನಿ ದುನಿಯಾಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ. ರಾತ್ರೋ ರಾತ್ರಿ ದೊಡ್ಡ ಸ್ಟಾರ ನಟಿಯಾಗುತ್ತಾರೆ.  ಅಲ್ಲಿಂದ ಅವರಿಗೆ ಸಿನಿ ಪಯಣ ಶುರುವಾಯಿತು. ಕನ್ನಡ  ಸಿನಿಮಾದಲ್ಲಿ ಮಾತ್ರವಲ್ಲದೆ ತೆಲಗು ಸಿನಿ ಜಗತ್ತಿಗೂ ಕಾಲಿಡುತ್ತಾರೆ. ತೆಲಗು ಇಂಡಸ್ಟ್ರಿಯಲ್ಲಿಯೂ ಬಹು ಬೇಗನೆ ಎತ್ತರದ ಶಿಖಕ್ಕೆ ಎರುತ್ತಾರೆ.

ಇತ್ತೀಚೇಗೆ ರಶ್ಮಿಕಾ ಅವರಿಗೆ ಬಾಲಿವುಡ್ ನಿಂದಲೂ ಸಿನಿ ಆಫರ್ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸಿದ್ದಾರ್ಥ್ ಮಲ್ಹೋತ್ರ ಅಭಿನಯಿಸುತ್ತಿರುವ  ‘ಮಿಷನ್ ಮಜ್ನು’ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು ನಟಿಸುತ್ತಿದ್ದಾರೆ. ಇನ್ನೂ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಗೆ ಸಿನಿಮಾ ಮಾಡಲು ಆಫರ್ ಬಂದಿದೆ. ಅವರೊಂದಿಗೆ ಸಿನಿಮಾ ಮಾಡಲು ಈಗಾಗಲೇ ರಶ್ಮಿಕಾ ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಡೆಡ್ಲಿ’ ಎಂದು ಹೆಸರಿಡಲಾಗಿದೆ.

ಮಿಷನ್ ಮಜ್ನು ಸಿನಿಮಾ ಮುಗಿದ ಬಳಿಕ ಡೆಡ್ಲಿ ಸಿನಿಮಾ ಶೂಟಿಂಗ್ ಗೆ ರಶ್ಮಿಕಾ ತೆರಳುತ್ತಾರೆಂದು ತಿಳಿದು ಬಂದಿದೆ. ಇನ್ನೂ ಡೆಡ್ಲಿ ಸಿನಿಮಾದಲ್ಲಿ ರಶ್ಮಿಕಾ ಅವರು ಬಿಗ್ ಬಿ ಅವರ ಮಗಳ ಪಾತ್ರದಲ್ಲಿ ನಟಿಸುತ್ತಾರಂತೆ. ಈ ಸಿನಿಮಾಗಾಗಿ ಸುಮಾರು 5 ಕೋಟಿಯನ್ನು ಕೇಳಿದ್ದಾರೆಂದು ತಿಳಿದು ಬಂದಿದೆ. ಇದರ ಬಗ್ಗೆ ಯಾವುದೇ ತಕರಾರಿಲ್ಲದೆ ನಿರ್ಮಾಪಕರು ಒಪ್ಪಿಗೆಯನ್ನು ಸೂಚಿಸಿದ್ದಾರಂತೆ. ಒಟ್ಟಿನಲ್ಲಿ ಕನ್ನಡ, ತೆಲುಗಿನಲ್ಲಿ ಬ್ಯೂಸಿ ಇರುವ ನಟಿ ಇನ್ನು ಮುಂದೆ ಬಾಲಿವುಡ್ ನಲ್ಲಿ ಕಮಾಲ ಮಾಡಲು ಸಜ್ಜಾಗಿದ್ದಾರೆ.

About Author

Priya Bot

Leave A Reply