ಹೊಸಪೇಟೆ  ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ನಮ್ಮ ಆರೋಗ್ಯ ಸಧೃಡವಾಗಿರುತ್ತದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.  ನಗರದಲ್ಲಿ ಭಾನುವಾರ ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನ್ಯೂ ಲೈಫ್ ನ್ಯೂ ಡಿಸ್ಟ್ರಿಕ್ ಸೆಲೆಬ್ರೆಷನ್ ಹೆಸರಲ್ಲಿ ನಡೆದ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಸಚಿವರು ಸೈಕಲ್ ತುಳಿಯುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ನವೋಲ್ಲಾಸದ ಜೀವನ ನಮ್ಮೆಲ್ಲರದ್ದಾಗಬೇಕು.‌ ಹೀಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಠಿಕಾಂಶಯುಕ್ತ ಆಹಾರದೊಂದಿಗೆ ಯೋಗ ಹಾಗೂ ವ್ಯಾಯಾಮವು ಅತೀ ಮುಖ್ಯವಾಗಿದೆ.  ಇದರೊಂದಿಗೆ ಬೈಸಿಕಲ್ ಓಡಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಇಂತಹ ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಸಧೃಡ ಆರೋಗ್ಯ ನಮ್ಮದಾಗಿಸಿಕೊಳ್ಳೋಣ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಇಂದರ್ ಕುಮಾರ ಜೈನ್, ಹಿತೇಶ್ ಬಾಗರೇಚ್, ಮಹೇಂದ್ರ ಜೈನ್ ಉಪಸ್ಥಿತರಿದ್ದರು.

Leave A Reply