ಬಳ್ಳಾರಿ- ಸದ್ಯಕ್ಕೆ ಬಳ್ಳಾರಿಯ ಬೂಡಾ ಅಧ್ಯಕ್ಷರ ನೇಮಕಾತಿ ವಿವಾದ ಮುಗಿಯುವ ಲಕ್ಷಣಗಳು ಕಾಣುತಿಲ್ಲಾ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೂಡಾ ಅಧ್ಯಕ್ಷರಾಗಿ ದಮ್ಮೂರ್ ಶೇಖರ್ ಬದಲಿಗೆ ರಾಮಲಿಂಗಪ್ಪಾ ಅವರನ್ನು ನೇಮಕಮಾಡಿ ಆದೇಶ ಮಾಡಲಾಗಿತ್ತು. ಆದ್ರೆ ಈಗ ದಮ್ಮೂರ್ ಶೇಕರ್ ಅವರನ್ನು ಮರು ನೇಮಕ ಮಾಡುವಂತೆ ಸಿ ಎಮ್ ಬಿ ಎಸ್ ವೈ ಅವರು ಆದೇಶ ಮಾಡಿದ್ದಾರೆ. ಎರಡೇ ದಿನದಲ್ಲಿ ಮರು ಆದೇಶ ಮಾಡಿಸಿಕೊಂಡು ಬರುವಲ್ಲಿ ದಮ್ಮೂರು ಶೇಖರ್ ಯಶಸ್ವಿಯಾಗಿದ್ದಾರೆ.

ಏಕಾಏಕಿ ಜ.27ರಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಚಿವ ಈಶ್ವರಪ್ಪ ಅಳಿಯ ರಾಮಲಿಂಗಪ್ಪ ಅವರನ್ನ ನೇಮಕ ಮಾಡಲಾಗಿತ್ತು. ಸಚಿವ ಆನಂದ ಸಿಂಗ್ ಅವರ ಶಿಫಾರಸ್ಸು ಹಿನ್ನಲೆ ರಾಮಲಿಂಗಪ್ಪಾ ಅವರ ನೇಮಕ ಮಾಡಲಾಗಿತ್ತು. ಅಲ್ಲದೇ ಇದು, ಬಿಜೆಪಿಯೊಳಗಿನ ಭಿನ್ನಮತವನ್ನ ಬಯಲಿಗೆ ತಂದಿತ್ತು ಇದೀಗ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದ ರಾಮಲಿಂಗಪ್ಪ ಅವರನ್ನ ವಿಜಯನಗರ ಪ್ರಾಧಿಕಾರದ ಅಧ್ಯಕ್ಷರನ್ನಾಗಿಸಿ ಮರು ಆದೇಶ ಮಾಡಿ ಸಿಎಂ ಬಿ ಎಸ್ ವೈ ಆದೇಶ ಹೊರಡಿಸಿದ್ದಾರೆ. ಆದ್ರೆ ಆನಂದ್ ಸಿಂಗ್ ವಿರುದ್ಧ ಸೇಡು ತೀರಿಸಿಕೊಂಡ್ರಾ ರೆಡ್ಡಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಾರಣ ರೆಡ್ಡಿ ಬ್ರದರ್ ಪರಮ ಆಪ್ತ ನಾಗಿದ್ದ ದಮ್ಮೂರ್ ಶೇಕರ್ ಅವರು ಕೇವಲ ಎರಡೇ ದಿನಗಳಲ್ಲಿ ಆದೇಶ ಬದಲಾವಣೆ ಮಾಡಿಸಿ ಸೋಮಶೇಖರ್ ರೆಡ್ಡಿ ಅವರು ಆನಂದ್ ಸಿಂಗ್ ವಿರುದ್ಧದ ಹಗೆ ತೀರಿಸಿಕೊಂಡರಾ ಎನ್ನುವ ಮಾತುಗಳು ಬಿಜೆಪಿಯಲ್ಲಿ ಕೇಳಿಬರುತ್ತಿವೆ….

About Author

Priya Bot

Leave A Reply