ರಾಯಚೂರು – ಕೇಂದ್ರ ಸರ್ಕಾರದ ಕೃಷಿ ಕಾಯಿದೆ ತಿದ್ದುಪಡಿ ಮಸೂದೆ ಜಾರಿಗೊಳಿಸಿರುವುದನ್ನ ಖಂಡಿಸಿ ರೈತರು ನಡೆಸುತ್ತಿರುವ ಹೋರಾಟ ೬ ತಿಂಗಳಗೆ ಕಾಲಿಟ್ಟ ಹಿನ್ನಲೆಯಲ್ಲಿ ಕಪ್ಪುಪಟ್ಟಿ ಧರಿಸಿ ಕರಾಳ ದಿನಾಚರಣೆ ಆಚರಿಸಲಾಯಿತು. ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಕಿಸಾನ್ ಸಂಘರ್ಷ ಸಮಿತಿಯ ಮುಖಂಡರಿಂದ ಕಪ್ಪುಪಟ್ಟಿ ಧರಿಸಿ, ಕೇಂದ್ರ ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕರಾಳ ದಿನಾಚರಣೆ ಆಚರಿಸಿದರು.

ಕೇಂದ್ರ ಸರ್ಕಾರ ಕೃಷಿ ಕಾಯಿದೆ ತಿದ್ದುಪಡಿಗೊಳಿಸುವ ಜಾರಿ ಮಾಡಿತ್ತು. ಆಗ ರೈತರು ಕಾಯಿದೆಯನ್ನ ಹಿಂಪಡೆಯುವಂತೆ ರಾಷ್ಟ್ರವ್ಯಾಪಿಯಾಗಿ ಪ್ರತಿಭಟನೆ ನಡೆಸುವ ಮೂಲಕ‌ ಹೋರಾಟ ಆರಂಭಿಸಲಾಯಿತು. ಆದ್ರೆ ತಿದ್ದುಪಡಿ ಮಾಡಿರುವ ಕಾಯಿದೆಯನ್ನ ವಾಪಾಸ್ ಪಡೆಯಲಿಲ್ಲ. ಪರಿಣಾಮ ರೈತರು, ಅನೇಕ ಸಂಘಟನೆಗಳು ಪ್ರತಿಭಟನೆ ಮುಂದುವರೆಸಿದ್ದು, ಇಂದು ಹೋರಾಟ ೬ ತಿಂಗಳ ಪೂರೈಕೆ ಅಂಗವಾಗಿ ಕಪ್ಪುಪಟ್ಟಿ ಧರಿಸಿ ಕರಾಳ ದಿನಾಚರಣೆ ಆಚರಿಸಿ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಯನ್ನ ಹೋರಾಟಗಾರರು ಖಂಡಿಸಿ, ಕಾಯಿದೆಯನ್ನ ವಾಪಾಸ್ ಗೆ  ಒತ್ತಾಯಿಸಿದ್ರು. ಜಿಲ್ಲೆಯಲ್ಲಿ ಸಂಪೂರ್ಣ ‌ಲಾಕ್‌ಡೌನ್ ನಡುವೆಯು ಕರಾಳ ದಿನಾಚರಣೆ ಆಚರಿಸಿದ್ದು, ಸಾಕಷ್ಟು ಜನ ಸೇರಬಾರದೆಂದು ಸಂಘಟನೆಯ ಕೆಲ ಮುಖಂಡರು ಮಾತ್ರ ಇಂದಿನ ಕರಾಳ ದಿನಾಚರಣೆ ಭಾಗವಹಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply