ಬೆಂಗಳೂರು-ರಾಷ್ಟ್ರೀಯ ರೈತ ದಿನಾಚರಣೆ ಈ ದಿನವನ್ನು ದೇಶವ್ಯಾಪಿ ಜನರು ಅನ್ನದಾತರನ್ನು ನೆನೆದು ಶುಭಾಶಯ ಕೋರುತ್ತಿದ್ದಾರೆ. ಈ  ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ಒಂದು ದಿನ ಮೀಸಲಿಟ್ಟು ಅವರ ದಿನಾಚರಣೆ ಆಚರಿಸುತ್ತಿರುವುದುರೈತರಿಗೆ ಹೆಮ್ಮೆಯ ವಿಚಾರ. ಪೋಸ್ ಬುಕ್ ವಾಟ್ಸಪ್ ಸೇರಿದಂತ ಸಾಮಾಜಿಕ ಜಾಲತಾನದಲ್ಲಿ ನೆಟ್ಟಿಗರು ಸಹ ಇಡೀ ವಿಶ್ವಕ್ಕೆ ಅನ್ನ ಕೊಡುವವರನ್ನು ನೆನಪಿಸಿಕೊಂಡು ಧನ್ಯವಾದ ತಿಳಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ರೈತರನ್ನು ನೆನೆಪಿಸಿಕೊಳ್ಳುತ್ತಿದ್ದಾರೆ. ಇನ್ನು ಸದಾಕಾಲ ರೈತರ ಬಗ್ಗೆ ಮಾತನಾಡುವ ನಮ್ಮ ಕನ್ನಡ ಚಿತ್ರ ರಂಗದ ಡಿ ಬಾಸ್ ಎಂದೇ ಹೆಸರಾಗಿರುವ ದರ್ಶನ್ ಸಹ ರೈತ ದಿನಾಚರಣೆಯ ಶುಭಾಷಯ ತಿಳಿಸಿದ್ದಾರೆ. ಸಾಮಾನ್ಯವಾಗಿ ಡಿ ಬಾಸ್ ಏನೇ ಮಾಡಿದ್ರೂ ಸಹ ಒಂದು ಹೊಸತನ ಇರುತ್ತೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ರೈತರಿಗೆ ಶುಭಕೋರಿದ್ದಾರೆ. ರೈತರು ನಿಜವಾದ ವೀರರು ಎನ್ನುವ ಮೂಲಕ ರೈತರ ಮೇಲಿರುವ ಅವರಕಾಳಜಿಯನ್ನು ಎತ್ತಿ ತೋರಿಸುತ್ತೆ.

Leave A Reply