ಬೆಂಗಳೂರು  ದರ್ಶನ್ ಅವರು ಇಂದು ದಿಢೀರನೆ ಪೆಸ್ ಬುಕ್ ಲೈವ್ ಗೆ ಬಂದಿದ್ದು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದು ಡಿ ಬಾಸ್ ಲೈವ್ ನಲ್ಲಿ ಏನು ಹೇಳುತ್ತಾರೆ ಅಂಥಾ ಸಾಕಷ್ಟು ಕುತೂಹಲ ಮೂಡಿಸಿದ್ದರು. ‌ ಎಲ್ಲರಿಗೂ ಏನು ಮಾತನಾಡುತ್ತಾರೋ, ಏನು ಹೇಳುತ್ತಾರೋ ಎಂಬ ಕೂತುಹಲ ಮನೆ ಮಾಡಿತ್ತು. ಆದರೆ ಈಗ ಕೂತುಹಲಕ್ಕೆ ತೆರೆ ಬಿದ್ದಿದೆ. ದರ್ಶನ್ ಅವರು ಬಹು ನಿರೀಕ್ಷಿತ ರಾಬರ್ಟ್ ಸಿನಿಮಾ ಕುರಿತು ಮಾತನಾಡಿದರು. ರಾಬರ್ಟ್ ಸಿನಿಮಾವನ್ನು ಥೀಯೇಟರ್ ಗಳಲ್ಲಿನೇ ಬಿಡುಗಡೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ OTT ಬಿಡುಗಡೆ ಮಾಡುವುದಿಲ್ಲ. ನಾವು ಸಿನಿಮಾವನ್ನು ಕಷ್ಟಪಟ್ಟು ಮಾಡಿರುತ್ತೇವೆ. ಅಭಿಮಾನಿಗಳ ಚಪ್ಪಾಳೆ ಸಿಳ್ಳೆ ಗೊಸ್ಕರ ಎಂತಹ ಕಷ್ಟದ ಸನ್ನಿವೇಶವನ್ನು ಅಭಿನಯಿಸಿರುತ್ತೇವೆ, ಹಾಗಾಗೀ  OTT ಯಲ್ಲಿ ಬಿಡುಗಡೆ ಮಾಡಿ ಇದೆಲ್ಲವನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ.  ಇನ್ನೂ ಸರ್ಕಾರ  ಅರ್ಧದಷ್ಟು ಅಂದರೆ 50% ದಷ್ಟು ಸಿಟುಗಳ ಭರ್ತಿಗೆ ಅವಕಾಶವನ್ನು ನೀಡಿದ್ದಾರೆ. ಹಾಗೆಯೇ ಎಂತಹದೇ ಪರಿಸ್ಥಿತಿ ಬಂದರು ರಾಬರ್ಟ್ ಸಿನಿಮಾ ಥೀಯೇಟರನಲ್ಲಿಯೇ  ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ಫೆಬ್ರುವರಿ 16 ರಂದು ದರ್ಶನ್ ಅವರ ಹುಟ್ಟು ಹಬ್ಬ ಇರುವುದರಿಂದ, ನಾನು ಈ ವರ್ಷ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಹಾಗಾಗೀ ಯಾರೂ ಮನೆ ಹತ್ತಿರ ಬರಬಾರದು . ಈ ವರ್ಷ ತುಂಬಾ ಬದಲಾಗಿದೆ ಮನೆಯ ಕಷ್ಟವನ್ನು ಆಲಿಸಿ ಸುಖಾ ಸುಮ್ಮನೆ ಹಣ ಖರ್ಚು ಮಾಡಿಕೊಂಡು ಬರಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು. ಎಲ್ಲ ಸರಿಹೋದ ಮೇಲೆ ಮುಂದಿನ ವರ್ಷ 2022 ಕ್ಕೆ ಸಂಭ್ರಮದಿಂದ ಆಚರಿಸೋಣ ಎಂದು ಹೇಳಿದರು.

Leave A Reply