ಜಪಾನ- ಇಂದಿನ ಸಮಾಜದಲ್ಲಿ ಏನಬೇಕಾದ್ರೂ ನಡೆಯ ಬಹುದು ಎನ್ನುವುದಕ್ಕೆ  ಈ ಒಂದು ಘಟನೆ ಸಾಕ್ಷಿ. ಹೆತ್ತ ತಾಯಿಯನ್ನು ನಾವು ದೇವರಿಗೆ ಹೋಲಿಕೆ ಮಾಡುತ್ತೆವೆ.  ಆದ್ರೆ ಇಲ್ಲೊಬ್ಬ ಮಗಳು ತನ್ನ ಹೆತ್ತ ತಾಯಿಯ ಶವವನ್ನು ಒಂದಲ್ಲಾ ಎರಡಲ್ಲಾ ಸುಮಾರು 10 ವರ್ಷಗಳ ಕಾಲ  ಫ್ರೀಜರ್ನಲ್ಲಿಟ್ಟಿದ್ದಾಳೆ ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಗೊತ್ತಾ. ಜಪಾನಿನ ರಾಜಧಾನಿ  ಟೋಕಿಯೋ ನಗರದಲ್ಲಿ ಈ ಘಟನೆ ನಡೆದಿದೆ. ಯುಮಿ ಯೋಶಿನೋ ಎನ್ನುವಾಕೆ ತನ್ನ ತಾಯಿಯ ಶವ ಫ್ರೀಜರ್ ನಲ್ಲಿ ಇಟ್ಟು ಈಗ ಪೊಲೀಸ್ರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.

ಶವ ಮುಚ್ಚಿಡಲು ಕಾರಣ  ಏನು ಗೊತ್ತಾ..?

ಜಪಾನಿನ ಟೋಕಿಯೋ ನಗರಲ್ಲಿ ವಾಸಾಗಿರುವ ಇವಳು ನಗರದ ಅಪಾರ್ಟಮೆಂಟ್ ಒಂದರಲ್ಲಿ  ವಾಸವಾಗಿದ್ದಳು. ಈ ಅಪಾರ್ಟ್ಮೆಂಟ್ ಅವರ ತಾಯಿಯ ಹೆಸರಲ್ಲಿ ಇತ್ತು. ಹೀಗಾಗಿ ತನ್ನ ತಾಯಿ ಸತ್ತಿರುವ ವಿಷಯ ಗೊತ್ತಾದ್ರೆ ಅಪಾರ್ಟಮೆಂಟ್ ಮಾಲೀಕರು ತನನ್ನು ಮನೆಯಿಂದ ಹೊರ ಹಾಕುತ್ತಾರೆ ಎನ್ನುವ ಭಯ ಅವಳನ್ನು ಕಾಡಿದೆ. ಹೀಗಾಗಿ ಅವಳು ತನ್ನ ತಾಯಿ ಸತ್ತಿರುವ ವಿಷಯವನ್ನು ಮುಚ್ಚಿಟ್ಟಿದ್ದಾಳೆ . ಆದ್ರೆ ಕಳೆದ ಮೂರು ತಿಂಗಳಿಂದ ಮನೆ ಬಾಡಿಗೆ ನೀಡದ ಕಾರಣ ಅಪಾರ್ಟಮೆಂಟ್ ಮಾಲೀಕುರು ಹಾಗೂ ಇವಳ ಮಧ್ಯೆ ಜಗಳವಾಗಿದೆ. ಆಗ ಅವರ ತಾಯಿ ಸತ್ತಿರುವ ವಿಷಯ ಬಹಿರಂಗವಾಗಿ. ಕಾರಣ ಅಪಾರ್ಟಮೆಂಟ್ ಮಾಲೀಕರು ಪೊಲೀರಿಗೆ  ಮಾಹಿತಿ ನೀಡಿದ್ದಾರೆ, ಸದ್ಯ ಹೆತ್ತ ತಾಯಿ ಶವ ಮುಚ್ಚಿಟ್ಟಿದ್ದ ಮಹಿಳೆ ಪೊಲೀಸ್ ವಶಕ್ಕೆ ಪಡೆದಿದ್ದಾರೆ ಎಂದು ಜಪಾನ್ ಮಾದ್ಯಮಗಳು ವರದಿ ಮಾಡಿವೆ.

About Author

Priya Bot

Leave A Reply