ಲೇಖನ ಡಾ. ಈಶ್ವರಾನಂದ ಸ್ವಾಮೀಜಿ

ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್|
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ||
ವ್ಯಕ್ತಿಗೆ ಎಷ್ಟೆ ಆಪತ್ತುಗಳಿದರೂ ತನ್ನ ಧರ್ಮವೇ ಶ್ರೇಷ್ಠ. ಪರಧರ್ಮದಿಂದ ಸುಖ ಸಂತೋಷ ದೊರೆಯುತ್ತಿದ್ದರೂ ಅದನ್ನು ಸ್ವೀಕರಿಸಬಾರದು. ತನ್ನ ಧರ್ಮದ ಶ್ರೇಯಸ್ಸಿಗಗಿ ಪ್ರಾಣ ತ್ಯಾಗ ಮಾಡುವುದು ನಿಜವದ ಮಾನವ ಧರ್ಮ.
ಹಲವಾರು ವರ್ಷಗಳ ಹಿಂದೆ ಒಬ್ಬ ಬೌದ್ಧ ಬಿಕ್ಷು ಧರ್ಮ ಪ್ರಚಾರ ಮತ್ತು ಗ್ರಂಥ ಸಂಗ್ರಹಿಸುತ್ತ ದೇಶ-ವಿದೇಶಗಳಲ್ಲಿ ಸಂಚರಿಸುತ್ತಿದ್ದನು. ಒಮ್ಮೆ ತಾನು ಸಂಗ್ರಹಿಸಿದ ಗ್ರಂಥಗಳನ್ನು ತಗೆದುಕೊಂಡು ತನ್ನ ದೇಶದತ್ತ ಪ್ರಯಾಣ ಬೆಳೆಸಿದನು. ಮಾರ್ಗ ಮಧ್ಯದಲ್ಲಿ ಹಡಗು ಭಾರದಿಂದ ನೀರಿನಲ್ಲಿ ಮುಳುಗುವ ಪ್ರಸಂಗ ಒದಗಿತು. ಆನರು ತಮ್ಮ ಪ್ರಾಣ ರಕ್ಷಣೆಗಾಗಿ ತಮ್ಮಲ್ಲಿರುವ ವಸ್ತುಗಳನ್ನೆಲ್ಲಾ ನೀರಲ್ಲಿ ಎಸೆದರು. ಆದರೆ ಬೌದ್ಧ ಬಿಕ್ಷು ತಾನು ಜೀವನವಿಡಿ ಸಂಗ್ರಹಿಸಿದ ಧರ್ಮ ಗ್ರಂಥಗಳು ತನ್ನ ದೇಶಕ್ಕೆ ಮುಟ್ಟಿಸಬೇಕು. ಬೌದ್ಧ ಧರ್ಮ ಮತ್ತು ಧರ್ಮಗ್ರಂಥಗಳು ಉಳಿಯಬೇಕು ಎನ್ನುವುದೆ ತನ್ನ ಆಶಯ ಎಂದು ಹೇಳಿ ನೀರಿನಲ್ಲಿ ಹಾರಿ ಪ್ರಾಣ ತ್ಯಾಗ ಮಾಡಿದನು. ಇವನ ಆಶಯದಂತೆಹಡಗಿನ ಭಾರವು ಕಡಿಮೆಯಾಗಿ ಜನರು ತಮ್ಮ ದೇಶ ಸೇರುವುದರೊಂದಿಗೆ ಬಿಕ್ಷುವಿನ ಮಾತಿನಂತೆ ದೇಶಾದ್ಯಂತ ಬೌದ್ಧ ಧರ್ಮ ಮತ್ತು ಧರ್ಮಗ್ರಂಥಗಳು ಉಳಿ ಬೇಳೆಸಿದರು.
ಆಸೆಗಾಗಿ ಸತ್ತವರು ಕೋಟಿ
ಆಮಿಷಕ್ಕಾಗಿ ಸತ್ತವರು ಕೋಟಿ
ಹೆಣ್ಣು, ಹೊನ್ನು, ಮಣ್ಣಿಗಾಗಿ ಸತ್ತವರು ಕೋಟಿ
ನಿನಗಾಗಿ ಸತ್ತವರು ಒಬ್ಬರೂ ಕಾಣೆ ಗುಹೇಶ್ವರಾ.

ಮೇಲಿನ ಸನ್ನಿವೇಶ ಕಲ್ಪನೆ ಅಥವಾ ಕಟ್ಟು ಕಥೆಯನಿಸಿದರೂ, ತನ್ನ ಧರ್ಮಕ್ಕಾಗಿ ದೇಶಕ್ಕಾಗಿ ಪ್ರಾಣ ತ್ಯಗ ಮಾಡಿದ ಹುತಾತ್ಮರು ನಮ್ಮ ದೇಶದಲ್ಲಿ ಅನೇಕರಿದ್ದಾರೆ. ಅವರು ತಮ್ಮ ಸ್ವಾರ್ಥಶ್ರೇಯಸ್ಸಯನ್ನು ಬಯಸದೆ ಸಮಾಜ, ಧರ್ಮ, ರಾಷ್ಟ್ರದ ಉಳಿವಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ನಮ್ಮ ಜನರು ಹಣ, ಹೆಂಡ, ಆಸ್ತಿ, ಅಧಿಕಾರ, ಆಸೆ, ಆಮಿಷಗಳಿಗಾಗಿ ತಮ್ಮ ಪ್ರಾಣವನ್ನೇ ಕೊಡುತ್ತಾರೆ ವಿನಹ ದೇವರಿಗಾಗಿ, ಧರ್ಮಕ್ಕಾಗಿ, ಸಮಾಜಕ್ಕಾಗಿ ಪ್ರಾಣತ್ಯಾಗ ಮಾಡುವವರನ್ನು ಕಂಡಿಲ್ಲ ಎನ್ನುವರು ಅಲ್ಲಮಪ್ರಭುದೇವರು. ಆದರೆ ಇವರು ಎಲೆ ಮರೆಯ ಕಾಯಿಯಾಗಿ ಸಮಾಜೋನ್ನತಿಗಾಗಿ ಧರ್ಮದ ಜಾಗೃತಿಗಾಗಿ ಶ್ರಮಿಸಿ ಕಣ್ಮರೆಯಾಗಿರುತ್ತಾರೆ. ದೇವರ ದಾಸಿಮಯ್ಯ ಮೊದಲಾದ ಶರಣರು ಈ ಸಾಲಿಗೆ ಸೇರಿದ್ದಾರೆ. ನಾವು ಸಹ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜದ ಒಳಿತಿಗಾಗಿ ಶ್ರಮಿಸೋಣ ! ಬನ್ನಿ ಒಂದಾಗೋಣ !! ಧರ್ಮ ಉಳಿಸೋಣ !!!

About Author

Priya Bot

Leave A Reply