ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು

0

ಮಂಗಳೂರು

ಹೆರಿಗೆಯ ಸಮಯದಲ್ಲಿ ಅಧಿಕ ರಕ್ತಸ್ರಾವಕ್ಕೀಡಾಗಿ ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಲ್ಲಿ ನಡೆದಿದೆ. ಕಡಬ ತಾಲೂಕಿನ ಕೊಂಬಾರು ಇಡ್ಯಡ್ಕ ಕಟ್ಟೆ ನಿವಾಸಿ ಚೇತನ್ ಎಂಬವರ ಪತ್ನಿ ವಿದ್ಯಾ (30) ಎಂಬವವರು ಮೃತ ಮಹಿಳೆ. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಇವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಮೃತ ವಿದ್ಯಾರಿಗೆ ಈ ಮೊದಲು ಎರಡು ಹೆಣ್ಣು ಮಕ್ಕಳಿದ್ದು, ಈಗ ಎರಡು ಅವಳಿ ಹೆಣ್ಣು ಮಕ್ಕಳ ಹೆರಿಗೆಯ ವೇಳೆ ವಿಪರೀತವಾಗಿ ರಕ್ತಸ್ರಾವ ಆಗಿ ಮೃತಪಟ್ಟಿದ್ದಾರೆ.

ನವಜಾತ ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ. ಮೃತರು ಮೂಲತಃ ಸುಳ್ಯದ ಚಾರ್ವಾಕ ಇಡ್ಯಡ್ಕ ನಿವಾಸಿಯಾಗಿದ್ದು, ಸುಬ್ರಹ್ಮಣ್ಯ ಸಮೀಪದ ಕೊಂಬಾರಿನ ಚೇತನ್ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಮೃತರು ತಂದೆ, ತಾಯಿ, ತಮ್ಮ,ತಂಗಿ,ಪತಿ ಹಾಗೂ ನವಜಾತ ಮಕ್ಕಳನ್ನು ಸೇರಿದಂತೆ ನಾಲ್ಕು ಮಕ್ಕಳನ್ನು ಅಗಲಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply