ಪುನೀತ್ ರಾಜ್ ಕುಮಾರ್ ಅಭಿಮಾನಿ ಸಾವು..!

0

ವಿಜಯನಗರ-ಚಿತ್ರ ನಟರು ಅಂದ್ರೆನೇ ಹಾಗೆ. ಅವರನ್ನು ನೋಡಲು ಅವರ ಸಿನಿಮಾ ನೋಡಲು ಅಭಿಮಾನಿಗಳು  ವರ್ಷಗಳ ಕಾಲವೇ ಕಾದು ಕುಳಿತಿರುತ್ತಾರೆ. ಹೀಗೆ ಪವರ್ ಸ್ಟಾರ್  ಪುನೀತ್ ಅವರನ್ನು ನೋಡಲೇ ಬೇಕೆ ಎಂದು ಕಾದು ಕುಳಿತಿದ್ದ 16 ವರ್ಷದ ಆದರ್ಶ್ ಇಂದು ಅಕಾಲಿಕ ಮರಣ ಹೊಂದಿದ್ದಾನೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸಿ ಆದರ್ಶ್ (16) ಪವರ್ ಸ್ಟಾರಗ ಪುನೀತ್ ಅವರ ಅಪ್ಪಟ ಅಭಿಮಾನಿ. ಪವರ್ ಸ್ಟಾರ್ ಪುನೀತ್ ಅವರ ಚಿತ್ರಗಳನ್ನು ನೋಡಿಕೊಂಡು ಬೆಳೆದ ಬಾಲಕ, ಅಪ್ಪಟ ಅಪ್ಪು ಅಭಿಮಾನಿ.

ಬಾಲ್ಯದಿಂದಲೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದ ಆದರ್ಶ, ಹುಟ್ಟಿದಾಗಲೇ  ನಾನಾ ಕಾಯಿಲೆಗಳಿಂದ ಬಳಲುತ್ತಿದ್ದ. ದೇಹ ಬೆಳದರೂ ಕೈ ಕಾಲುಗಳಲ್ಲಿ ಶಕ್ತಿ ಇಲ್ಲದೇ ತಂದೆ ತಾಯಿಗಳು ಆರೈಕೆಯಲ್ಲಿಯೇ ಬೆಳಿದಿದ್ದ.

ಕಳೆದ ಎರಡು ವರ್ಷಗಳ ಹಿಂದೆ ಪುನೀತ್ ಅವರನ್ನು ನೋಡಲೇ ಬೇಕು ಎಂದ ಹಟ ಹಿಡಿದು ಆದರ್ಶ್ ಕುಳಿತಿದ್ದ, ಆಗ ವಿಷಯ ತಿಳಿದ ಅಪ್ಪು ಅವರು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿ ಆದರ್ಶ್ ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು.

ಆದರ್ಶ್ ಅಪ್ಪು ಸಿನಿಮಾ, ಹಾಡು ಡ್ಯಾನ್ಸ್ ನೋಡಿಯೇ ಬೆಳೆದ ಅಭಿಮಾನಿ. ಹೊಸಪೇಟೆಯಿಂದ ಬೆಂಗಳೂರಿನ ಪುನೀತ್ ನಿವಾಸಕ್ಕೆ ಕರೆಯಿಸಿಕೊಂಡಿದ್ದ ಪುನೀತ್ ರಾಜ್‍ ಕುಮಾರ್ ಆದರ್ಶ್ ಗೆ  ಧನ ಸಹಾಯ ಮಾಡಿ, ಅವರ ಕಾಯಿಲೆಗೆ ಚಿಕಿತ್ಸೆ ನೀಡುವ ಭರವಸೆ ನೀಡಿದ್ದರು. ನಾನಾ ಕಾಯಿಲೆಗಳಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆಗೆಂದು ಆಸ್ಪತ್ರೆಯ ಆಡಳಿತ ಮಂಡಳಿತ ಜತೆ ಈ ಹಿಂದೆ ಮಾತನಾಡಿದ್ದರು, ಇದಲ್ಲದೇ ಅಮೇರಿಕಾ ಮೂಲದ ವೈದ್ಯರಿಗೂ ಚಿಕಿತ್ಸೆಗೆ ಮನವಿ ಮಾಡಿದ್ದರು.ವೈದ್ಯರು ಸಹ ಚಿಕಿತ್ಸೆ ನೀಡುವ ಭರವಸೆ ನೀಡಿದ್ದರು. ಆದ್ರೆ ಕರೋನ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದ ಕಾರಣ ಚಿಕಿತ್ಸೆಗೆ ಹೋಗಲು ಆಗಲೇ ಇಗಲೇ ಇಲ್ಲಾ . ಆದ್ರೆ ಈಗ ಪುನೀತ್ ಅವರ ಅಪ್ಪಟ ಅಭಿಮಾನಿ ಇಂದು ಇಹಲೋಕ ತೊರೆದಿದ್ದಾನೆ…‌

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply