ನೆರಳೆ ಹಣ್ಣಿಗೆ ಡಿಮ್ಯಾಂಡೋ ಡಿಮ್ಯಾಂಡ್

0

ಬಳ್ಳಾರಿ  – “ಕಪ್ಪು ಹೆಂಡತಿಯೆಂದು ಜರಿದು ನುಡಿಯಲು ಬೇಡ, ನೇರಳೆ ಹಣ್ಣು ಬಲು ಕಪ್ಪು, ಆದರೂ ತಿಂದೂ ನೋಡಿದರೆ ರುಚಿ ಬಳ”,  “ನೇರಳೆ ನನ್ನಲ್ಲಿ ಬಾರಲೇ, ಅನಾರೋಗ್ಯ ನಿಗಲೇ” ಹೀಗೆ ಜನಪದ ಶೈಲಿಯಲ್ಲಿ ಕರೆಸಿಕೊಳ್ಳುವ ಮೂಲಕ ಮನುಷ್ಯನ ಆರೋಗ್ಯಕ್ಕೆ ರಾಮಬಾಣವಾಗಿದೆ.

ಕುರುಗೋಡು, ಕಂಪ್ಲಿ, ಬಳ್ಳಾರಿ ಗಣಿ ನಾಡಿನಲ್ಲಿ ಸಾಮಾನ್ಯ ರೈತರು ಮಾವು, ಬಾಳೆ, ಸೀಬೆ, ದಾಳಿಂಬೆ ಬೆಳೆ ಬೆಳೆದು ಮಾರಾಟ ಮಾಡುವುದನ್ನು ಕಂಡಿದ್ದೇವೆ ಆದರೆ   ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕು ಸೇರಿದಂತೆ ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ನೆರೆಳೆ ಹಣ್ಣು ಮಾರಾಟ ಬಲು ಜೋರಾಗಿದೆ ಇದನ್ನು ಖರೀದಿ ಮಾಡಲು ಜನರು ಮುಗಿಬಿಳುತಿದ್ದಾರೆ.

ಜಿಲ್ಲೆಯ ಬಹುತೇಕ ತಾಲ್ಲೂಕಿನ ಕಡೆಗಳಲ್ಲಿ ನೇರಳೆ ಹಣ್ಣು ಬೆಳೆದು ನೆಮ್ಮದಿ ಜೀವನ ಕಂಡು ಕೊಂಡು ವ್ಯಾಪಾರ ಮಾಡಿ ಇದರಿಂದ ಉತ್ತಮ ಬೆಲೆ ಪಡೆಯುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಶುಗರ್ ಖಾಯಿಲೆಗೆ ಬಹಳ ಉತ್ತಮ ಹಣ್ಣಾಗಿವೆ. ಆದ್ದರಿಂದ ಅತಿ ಹೆಚ್ಚು ವೃದ್ಧರು ಬಹಳ ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ನೇರಳೆ ಹಣ್ಣು ಕಪ್ಪಾಗಿದ್ದು ತುಂಬಾ ಸಿಹಿಯಾಗಿರುವುದರಿಂದ ಮಾರು ಕಟ್ಟೆಯಲ್ಲಿ ತುಂಬಾ ಉತ್ತಮ ಹೆಸರು ಪಡೆದು  ಅತ್ಯಾಧಿಕ ಲಾಭ ಪಡೆಯುತ್ತಿದ್ದಾರೆ ನೇರಳೆ ಮಾರಾಟಗಾರರು.

ಚಿಕ್ಕಿವರಿಂದ ಹಿಡಿದು ಹಿರಿಯರ ತನಕ ಈ ಹಣ್ಣು ಅತಿ ಹೆಚ್ಚಾಗಿ ಸೇವನೆ ಮಾಡುವುದರಿಂದ ಹಣ್ಣು ಖರೀದಿ ಸಲು ಮುಗಿಬಿಳುತ್ತಾರೆ. ಗಣಿ ನಾಡಲ್ಲಿ ಅಂಜೂರು, ದಾಳಿಂಬೆ, ಪಪ್ಪಾಯಿ, ಸೇಬು  ಇತರೆ  ಹಣ್ಣುಗಳಿಗಿಂತ ನೆರಳೆ ಹಣ್ಣು ಬಹಳ ಅತಿ ವೇಗವಾಗಿ ಖರೀದಿ ಯಾಗುತ್ತಿದೆ ಇದರಿಂದ ನೆರಳೆ ಹಣ್ಣಿಗೆ ಬಹಳ ಡಿಮ್ಯಾಂಡ್ ಆಗಿದೆ. ರಸ್ತೆ ಬದಿಯಲ್ಲಿ, ಬಸ್ಟ್ಯಾಂಡ್ ಪಕ್ಕದಲ್ಲಿ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಬಂಡಿಯಲ್ಲಿ ಮಾರಾಟ ವಾಗುತ್ತಿರುವ ನೆರಳೆ ಹಣ್ಣು ಖರೀದಿ ಮಾಡಲು ಪ್ರತಿಯೊಬ್ಬರೂ ಮುಂದಾಗುತ್ತಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply