ಆಸೆ

0

ಡಾ. ಈಶ್ವರಾನಂದ ಸ್ವಾಮೀಜಿ

ಆಸೆಯಂಬುದು ಅರಸಿಂಗಲ್ಲದೆ ಶಿವಭಕ್ತರಿಗೂಂಟೆ ಅಯ್ಯಾ?
ರೋಷಯಂಬುದು ಯಮಧೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಮಗೆಕೆ? ಈಶ್ವರನೊಪ್ಪ ಮಾರಯ್ಯ ಪ್ರೀಯ
ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ.

ಮಾನವನಿಗೆ ಆಸೆ ಆಮಿಷಗಳು ಸಾಮಾನ್ಯವಾದರೂ ಅದನ್ನು ಎಷ್ಟರಮಟ್ಟಿಗೆ ಇರಬೇಕೆನ್ನುವುದು ಶರಣರ ಧ್ಯೇಯ. ಮಾನವನು ಪರಮ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮವನ್ನು ಅನುಭವಿಸುವದರ ಜೊತೆಗೆ ಮೋಕ್ಷ ಹೊಂದಬೇಕಾದದ್ದು ಪರಮ ಗುರಿ. ಇದು ಶರಣರ, ಸಂತರ, ದಾಸರ, ಭಕ್ತರ ಸಂಪ್ರದಾಯವಾಗಿದೆ. ಇದರ ಕಡೆಗೆ ಹೆಚ್ಚು ಗಮನಹರಿಸಿ ಲೌಕಿಕ ವಿಷಯ ವಸ್ತುಗಳ ಕಡೆಗೆ ಅಷ್ಟರಮಟ್ಟಿಗೆ ಇರಬೇಕೆನ್ನುವುದು ಅನುಭಾವಿಗಳ ಅನುಭವದ ವಚನಗಳು.

ನಾನು ತಮಾಸೆಗೆ ಒಂದು ಕಥೆ ಹೆಳ್ತಿನಿ ಅದು ಹಾಸ್ಯವಿರಬಹುದು. ಅದರ ಅರ್ಥ, ತಿರುಳು ಮಾತ್ರ ಎಲ್ಲರಿಗೂ ಅನ್ವಯಿಸುತ್ತದೆ. ತಿಮ್ಮ ಒಂದು ದಿವಸ ದುಃಖತಪ್ತನಾಗಿ ಕುಳಿತಿದ್ದ. ಅಲ್ಲಿಗೆ ಅವನ ಮಿತ್ರ ಗುಂಡ ಬಂದ. ಖಿನ್ನನಾಗಿರವ ತಿಮ್ಮನನ್ನು ಕಂಡ ಗುಂಡ ಕೇಳಿದ, “ಯಾಕೆ ತಿಮ್ಮ ದುಃಖದಿಂದ ಕುಳಿತಿದ್ದಿಯಾ ಏನಾಯ್ತು?” ಅದಕ್ಕೆ ತಿಮ್ಮ ಅಳುತ್ತ “ನನ್ನ ಮಾವ ತಮ್ಮ ಹೆಸರಿನಲ್ಲಿದ್ದ ಆಸ್ತಿಯಲ್ಲ ನನ್ನ ಹೆಸರಿಗೆ ಬರೆದು ಸತ್ತು ಹೋದರು! ಅದನ್ನು ಯೋಚಿಸಿ ಅಳುತಿದ್ದೇನೆ” ಎಂದ. ಆಗ ಗುಂಡ ನಿನ್ನ ಮಾವ ನಂಗೊತ್ತು. ಅವರಿಗೆ 80 ವರ್ಷ ವಯಸ್ಸಾಗಿತಲ್ಲ.

ಸಾವು ಸಹಜವಾದುದು ತಾನೇ? ಅದಕ್ಕೋಸ್ಕರ ಯಾಕೆ ಇಷ್ಟೊಂದು ದುಃಖ? ನಿಜ ಹೇಳಬೇಕಾದರೆ, ಅವರ ಅಷ್ಟೊಂದು ಆಸ್ತಿ ನಿನಗೆ ಬರುತಿರುವುದಕ್ಕೆ ನೀನು ಸಂತೋಷಪಡಬೇಕು. ಎಂದು ತಿಮ್ಮನಿಗೆ ಸಾಂತ್ವನ ಹೇಳಲು. ಅದಕ್ಕೆ ತಿಮ್ಮ “ನನ್ನ ದುಃಖ ನಿನಗೆ ಅರ್ಥ ಆಗೊದಿಲ್ಲ ಮಿತ್ರ! ಹೋದ ವಾರವೇ ನನ್ನ ಚಿಕ್ಕಪ್ಪ, ನನ್ನ ಹೆಸರಿಗೆ ಒಂದು ಲಕ್ಷದಷ್ಟು ಆಸ್ತಿ ಬರೆದಿಟ್ಟು ಸತ್ತುಹೋದರು” ಎಂದು ಹೇಳಿ ಇನ್ನೂ ಜೊರಾಗಿ ಸದ್ದು ಮಾಡುತ್ತ ಅಳತೊಡಗಿದ. ಗುಂಡನಿಗೆ ಆಶ್ಚರ್ಯ! “ನಿನ್ನ ಚಿಕ್ಕಪ್ಪನವರೂ ನನಗೆ ಗೊತ್ತು. ಅವರಿಗೆ 85ವರ್ಷ ವಯಸ್ಸು.

ಹಣ ಬಂದದ್ದು ತಿಳಿದು ಸಂತೋಷಪಡೋ ಬದ್ಲು ಮಂಕನಹಾಗೆ ಹೀಗೆ ಅಳ್ತಿದ್ದಿಯಲ್ಲ?” ಎಂದು ಗುಂಡ ಬೇಸರದಿಂದ ಹೇಳಿದ. “ನನ್ನ ದುಃಖ ಇನ್ನೂ ದೊಡ್ಡದು. ನನ್ನ ನೂರು ವರ್ಷ ವಯಸ್ಸಿನ ತಾತ ಎರಡು ಲಕ್ಷಕ್ಕೂ ಹೆಚ್ಚು ಆಸ್ತಿಯನ್ನು ನನ್ನ ಹೆಸರಿಗೆ ಬರೆದಿಟ್ಟು ನಿನ್ನೆ ಸತ್ತುಹೋದರು”ಎಂದ ತಿಮ್ಮನನ್ನು ಕಂಡ ಗೆಳಯ ಗುಂಡನಿಗೆ ಕೋಪವೇ ಬಂತು. “ನನಗೆ ಅರ್ಥಾನೆ ಆಗ್ತಿಲ್ಲ. ನೀನು ಯಾಕಾದ್ರೂ ಅಳ್ತಿದ್ದೀಯಾ ತಿಳೀತಿಲ್ಲ” ಎಂದ. ಅದಕ್ಕೆ ತಿಮ್ಮ ಕಣ್ಣುಗಳನ್ನು ಒರೆಸಿಕೊಳ್ಳುತ್ತ “ಶ್ರೀಮಂತರಾದ ನನ್ನ ಮಾವ, ಚಿಕ್ಕಪ್ಪ, ತಾತ ಎಲ್ಲರೂ ಸತ್ತುಹೋದ್ರು. ಇನ್ನು ಮೇಲೆ ನನ್ನ ಹೆಸರಿಗೆ ಆಸ್ತಿ ಬರೆಯಲು ಯಾರೂ ಉಳಿದಿಲ್ಲವಲ್ಲ”ಎಂದನು.

ಆಸೆಗಾಗಿ ಸತ್ತವರು ಕೋಟಿ, ಆಮಿಷಕ್ಕಾಗಿ ಸತ್ತವರು ಕೋಟಿ,
ಹೆಣ್ಣು, ಹೊನ್ನು, ಮಣ್ಣಿಂಗೆ ಸತ್ತವರು ಕೋಟಿ
ಗುಹೇಶ್ವರ ನಿನಗಾಗಿ ಸತ್ತವರನು ಒಬ್ಬರನೂ ಕಾಣೆ?

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply