ಲೇಖನ ಡಾ. ಈಶ್ವರಾನಂದ ಸ್ವಾಮೀಜಿ 

ಪುರಾತನರು ಮುಗ್ಧಭಕ್ತಿಗೆ ಹೆಸರಾದವರು. ಒಬ್ಬೊಬ್ಬರದು ಒಂದೊಂದು ತೆರನಾದ ಭಕ್ತಿ. ಅವರ ಭಕ್ತಿಯಲ್ಲಿ ವಿಶ್ವಾಸವನ್ನು ಕಾಣಬಹುದೇ ಹೊರತು ವಿಚಾರವನ್ನಲ್ಲ. ಅಲ್ಲಿ ಕಾಣಸಿಗುವುದು ಭಕ್ತಿಯ ವೈಭವ. ಯುಕ್ತಿಯ ಬಿಂಕವಲ್ಲ. ಪುರಾತನರ ಭಕ್ತಿಯ ಮಹಿಮೆಯನ್ನು ಬಸವಣ್ಣನವರು ತಮ್ಮ ವಚನೊಂದರಲ್ಲಿ ಹೀಗೆ ಬಣ್ಣಿಸಿದ್ದಾರೆ-

ಭಕ್ತಿ ಎಂತಹುದಯ್ಯ? ದಾಸಯ್ಯ ಮಾಡಿದಂತಹದು

ಭಕ್ತಿ ಎಂತಹುದಯ್ಯ? ಸಿರಿಯಾಳ ಮಾಡಿದಂತಹದು

ಭಕ್ತಿ ಎಂತಹುದಯ್ಯ? ಸಿಂಧುಬಲ್ಲಾಳ ಮಾಡಿದಂತಹದು

ಭಕ್ತಿ ಎಂತಹುದಯ್ಯ? ಕೂಡಲಸಂಗಮದೇವಾ

ನೀ ಬಾಣನ ಬಾಗಿಲ ಕಾಯ್ದಂತಹದು.

ಬಸವಣ್ಣನವರು ತಮ್ಮ ವಚನಗಳಲ್ಲಿ ದೇವರ ದಾಸಿಮಯ್ಯನ ಮೊದಲಾದ ಅನೇಕ ಜನ ಶರಣರನ್ನು ಹಾಗೂ ಅವರ ಭಕ್ತಿ ಸಾಧನೆಯ ವಿಶೇಷತೆಗಳನ್ನು ಉಲ್ಲೇಖಿಸಿದ್ದಾರೆ. ಈ ದೃಷ್ಟಿಯಲ್ಲಿ ದೇವರ ದಾಸಿಮಯ್ಯನವರನ್ನು. ಬಸವಣ್ಣನವರು ದಾಸ, ದಾಸಯ್ಯ, ದಾಸಿಮಯ್ಯ, ದಾಸಿದೇವ, ಜೇಡರ ದಾಸಿಮಯ್ಯ ಎಂಬ ಹೆಸರುಗಳಿಂದ ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. ಇವರ ಜೊತೆಗೆ ಸಿಂಧುಬಲ್ಲಾಳ, ಸಿರಿಯಾಳ, ಬಾಣ, ಮಯೂರ, ಕಕ್ಕಯ್ಯ, ಚನ್ನಯ್ಯ  ಮೊದಲಾದ ಶರಣರನ್ನೂ ಸ್ಮರಿಸಿದ್ದಾರೆ. ಬದುಕಿನಲ್ಲಿ ಬರುವ ಎಲ್ಲಾ ಕಷ್ಟ-ನಷ್ಟಗಳೂ ಭಗವಂತನ ಪರೀಕ್ಷೆಗಳು, ಆ ಪರೀಕ್ಷೆಗಳಲ್ಲಿ ತೇರ್ಗಡೆಯಾದವರು ದಾಸಿಮಯ್ಯನವರು. ಆದುದರಿಂದ ಬಸವಣ್ಣನವರು ದಾಸಿಮಯ್ಯನವರನ್ನು ನೆನೆಯುತ್ತ ತಮ್ಮ ಭಕ್ತಿ ಸಾಧನೆಯನ್ನು ಬಲಪಡಿಸಿಕೊಂಡರು.

ಭಕ್ತಿ ಎಂತಹುದಯ್ಯ? ದಾಸಯ್ಯ ಮಾಡಿದಂತಹದು- ದೇವರ ದಾಸಿಮಯ್ಯನವರು ಜಂಗಮ ದಾಸೋಹದಲ್ಲಿ ಹೆಸರಾಗಿದ್ದರು. ಅವರು ಶಿವಧ್ಯಾನ ಮಾಡುತ್ತ ಬಟ್ಟೆ ನೈಯ್ದರೆ ಅದ್ಭುತ ಸೀರೆಯೊಂದನ್ನು ತಯ್ಯರಾಯಿತು. ಅದನ್ನು ಕಂಡು ದಾಸಿಮಯ್ಯನವರು ದೇವರನ್ನು ಕುರಿತು “ಈ ಸೀರೆ ನೈಯ್ದವ ನಾನೋ, ನೀನೋ?” ಎಂದು ಪ್ರಶ್ನಿಸಿದರು. ಅದನ್ನು ಮಾರುವುದಕ್ಕೆ ಸಂತೆಗೆ ಒಯ್ದಾಗ ಯಾವ ವ್ಯಾಪಾರಿಗೂ ಅದರ ಬೆಲೆ ಕಟ್ಟುವುದಕ್ಕಾಗಲಿಲ್ಲ. ಹಾಗೆಯೇ ತಿರುಗಿ ತರುವಾಗ ದಾರಿಯಲ್ಲಿ ವೃದ್ಧ ಜಂಗಮನೊಬ್ಬನು ಅದನ್ನು ಬೇಡಲು, ದಸಿಮಯ್ಯನವರು ಅದನ್ನು ಕೊಟ್ಟರು. ಆ ವೃದ್ಧ ಜಂಗಮ ಬೇರೆ ಯಾರೂ ಆಗಿರದೇ, ಸಾಕ್ಷಾತ ಶಿವನೇ ಆಗಿದ್ದನು. ಅವನು ದಾಸಿಮಯ್ಯನವರಿಗೆ ಹಿಡಿಧಾನ್ಯವನ್ನು ಕೊಟ್ಟನು. ಅದನ್ನೊಯ್ದು ಸತಿಯಾದ ದುಗ್ಗಳೆಗೆ ಕೊಡಲು ಅವಳು ಭತ್ತದ ಕಣಜದಲ್ಲಿ ಹಾಕಿದಳು. ಅಂದಿನಿಂದ ಆ ಕಾಳು ‘ತವನಿಧಿ”ಯಾಯಿತು.

ಭಕ್ತಿ ಎಂತಹುದಯ್ಯ? ಸಿರಿಯಾಳ ಮಾಡಿದಂತಹದು- ಸಿರಿಯಾಳನೆಂಬುವನು ಕಂಚಿಪುರದ ಶೆಟ್ಟಿ. ಅವನ ಹೆಂಡತಿ ಚೆಂಗಳೆ. ಅವರಿಬ್ಬರು ಶಿವಭಕ್ತರು. ಅವರಿಗೆ ಚಿಲ್ಲಾಳನೆಂಬ ಮಗನಿದ್ದನು. ಒಮ್ಮೆ ಶಿವನು ಅವರ ಭಕ್ತಿ ಪರೀಕ್ಷೆಗೆಂದು, ಜಂಗಮರೂಪನಾಗಿ ಅವರಲ್ಲಿಗೆ ಹೋದನು. ಜಂಗಮ ಪ್ರೇಮಿಯಾದ ಅವರಿಗೆ ಈ ಜಂಗಮನು “ತನಗೆ ನರಮಾಂಸದ ವ್ರತವಿದೆ” ನಿಮ್ಮ ಮಗನ ಮಾಂಸವನ್ನು ಉಣಬಡಿಸಬೇಕೆಂದು ಹೇಳಿದನು. ಆಗ ಚಿಲ್ಲಾಳನನ್ನು ಕಡಿದು ಜಂಗಮಕ್ಕೆ ಎಡೆಮಾಡಿದರು. ಶಿವನು ಅವರ ಭಕ್ತಿಗೆ ಮೆಚ್ಚಿ ಜಂಗಮರೂಪಿಯಾದ ಶಿವನು ಪ್ರತಕ್ಷ್ಯನಾಗಿ ಮಗುವನ್ನು ಬದುಕಿಸಿ, ಸಿರಿಯಾಳ ಚಂಗಳೆಯರನ್ನು ಕೈಲಾಸಕ್ಕೆ ಕರೆದೊಯ್ದನು.

ಭಕ್ತಿ ಎಂತಹುದಯ್ಯ? ಸಿಂಧುಬಲ್ಲಾಳ ಮಾಡಿದಂತಹದು- ಜಂಗಮರೂಪಿಯಾದ ಶಿವನು ಸಿಂಧುಬಲ್ಲಾಳನ ಭಕ್ತಿಯನ್ನು ಒರೆಗೆ ಹಚ್ಚಲು ಅತನ ಹೆಂಡತಿಯನ್ನೇ ಬಯಸಿದಾಗ, ಬಲ್ಲಾಳನ ಚಿತ್ತಚಂಚಲವಾಗದೆ ಸತಿಗೆ ತನ್ನ ದೇಹವನ್ನು ಶಿವನಿಗರ್ಪಿಸೆಂದು ಆಜ್ಞಾಪಿಸುವನು. ಹೀಗೆ ಆಜ್ಞಾಪಿಸಿ ಮರೆಯಾದಾಗ, ಮಡದಿಯ ಮಡಿಲಲ್ಲಿ ಜಂಗಮನು (ಶಿವನು) ಮಗುವಾಗಿ ಮೊಲೆಯುಣ್ಣುವುದು ನೋಡಿ ಅನಂದಭರಿತನಾಗುವನು.

ಭಕ್ತಿ ಎಂತಹುದಯ್ಯ? ಕೂಡಲಸಂಗಮದೇವಾ ನೀ ಬಾಣನ ಬಾಗಿಲ ಕಾಯ್ದಂತಹದು- ಬಾಣಾಸುರನು ಮಹಾಶಿವಭಕ್ತನು. ಅವನ ಭಕ್ತಿಯನ್ನು ಮೆಚ್ಚಿ ಶಿವನು ಅವನ ಮನೆಯ ಕಾದುಕೊಂಡಿದ್ದನು. ಒಮ್ಮೆ ಶಿವನು “ಬೇಕಾದ ವರವನ್ನು ಕೇಳು” ಎನ್ನಲು ಬಾಣಾಸುರನು ನಿನ್ನ ಪೂಜಿಸಲಿಕ್ಕೆ ಎರಡೇ ಕೈಗಳು ಸಾಲವು, ಸಾವಿರ ಕೈಗಳು ಕೊಡು ಎಂದಾಗ ಶಿವನು ಕೊಟ್ಟೆಬಿಟ್ಟನು.

ಇವರಲ್ಲದೆ ಅನೇಕರು ಶಿವಭಕ್ತರಗಿದ್ದು, ಅಘೋರ ಭಕ್ತಿಯಿಂದ ಶಿವನನ್ನು ಒಲಿಸಿ, ಕೈಲಾಸ ಪಡೆಯಬೇಕೆಂಬ ಅತುಲ ಅಪೇಕ್ಷೆಯಿಂದಲೇ ತಮ್ಮ ಮಡದಿ ಮಕ್ಕಳನ್ನು ಅರ್ಪಿಸಲು ಮುಂದಾದರು. ಆದುದರಿಂದ ಇಂಥವರ ಭಕ್ತಿಯನ್ನು ಕೊಂಡಾಡಬಹುದು, ಅವರಂತೆ ಆಚರಿಸುದುವುದು ಕಠಿಣ.

ಹರ ತನ್ನ ಭಕ್ತರ ತಿರಿವಂತೆ ಮಾಡುವ

ಒರದು ನೋಡುವ ಮಿಸುನಿಯ ಚಿನ್ನದಂತೆ

ಅರದು ನೋಡುವ ಚಂದನದಂತೆ

ಅರಿದು ನೋಡುವ ಕಬ್ಬಿನ ಕೋಲಿನಂತೆ

ಬೆÉದರದೆ ಬೆಚ್ಚದೆÉ ಇರ್ದಡೆ

ಕರವಿಡಿದೆತ್ತಿಕೊಂಬ ನಮ್ಮ ರಾಮನಾಥನು.

 

About Author

Priya Bot

Leave A Reply