ಕೋಲಾರ- ರಾಜ್ಯದಲ್ಲಿ ಇಂದು ಎಸಿಬಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು ಬೆಂಗಳೂರು ಮಂಗಳೂರು ಬಳ್ಳಾರಿ ಕೋಲಾರ ಸೇರಿದಂತೆ ರಾಜ್ಯದ ಒಟ್ಟು 8 ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಇನ್ನು ಕೋಲಾರ ಜಿಲ್ಲಾ ಆರೋಗ್ಯ ಅಧಿಕಾರ ವಿಜಯ ಕುಮಾರ್ ಮನೆ ಮೇಲೆ ದಾಳಿ ಮಾಡಿದ್ದು, ವಿಜಯ ಕುಮಾರ್ ಆಸ್ತಿ ಕಂಡಿ ಎಸಿಬಿ ಅಧಿಕಾರಿಗಳು ದಂಗಾಗಿದ್ದಾರೆ. ವಿಜಯ ಕುಮಾರ್ ಅವರು ಕಚೇರಿ ಸೇರಿದಂತೆ ಕೋಲಾರ ಹಲವಾರು ಖಾಸಗಿ ಆಸ್ಪತ್ರೆಯ ಮೇಲೆಯೂ ದಾಳಿ ಮಾಡಿದ್ದಾರೆ. ವಿಜಯಕುಮಾರ್ ಅವರು ಬೆಂಗಳೂರಿನಲ್ಲಿ ಎರಡು ಅಪಾರ್ಟ್ಮೆಂಟ್ ಹಾಗೂ ಮುಳುಬಾಗಿಲು ನಗರದಲ್ಲಿ ಎರಡು ಮನೆ ಹೊಂದಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಯಲ್ಲೂ ದಾಳಿ ಮಾಡಿದ ಎಸಿಬಿ ಅಧಿಕಾರಿಗಳಿಗೆ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಹಣ ಬಂಗಾರದ ಆಭರಣಗಳು ಸಿಕ್ಕಿವೆ. ಬೆಂಗಳೂರು ಕೋಲಾರ ಎಸಿಬಿ ಅಧಿಕಾರಿಗಳು ವಿಜಯ್ ಕುಮಾರ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ….