ಮುಂಬೈ- ಚಿತ್ರರಂಗದಲ್ಲಿ ಸದ್ದು ಮಾಡಿ ಸಿನಿಮಾ ಮೂಲಕ ಸುದ್ದಿಯಾಗದ ನಟಿ ದಿಯಾ ಬೇರೆ ವಿಷಯಕ್ಕೆ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಈಗ 39 ನೇ ವಯಸ್ಸಿನಲ್ಲಿ ಮದುವೆ ಆಗುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ನಟಿ ದಿಯಾ ಮಿರ್ಜಾ ಅವರು  ಉದ್ಯಮಿ ವೈಭವ್ ರೇಖಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಒಂದು ವರ್ಷಗಳಿಂದ ವೈಭವ್ ರೇಖಿ ಜೊತೆಯಲ್ಲಿ ಡೇಟಿಂಗ್ ನಲ್ಲಿ ಇದ್ದ ಈ ಜೋಡಿ ಈಗ ಮದುವೆಯಾಗಿದ್ದಾರೆ. ಮದುವೆಯನ್ನು ಅಷ್ಟೇನೂ ಅದ್ದೂರಿಯಾಗಿ ಮಾಡದೇ ತಮ್ಮ ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣ ನೀಡಲಾಗಿತ್ತು. ಇನ್ನು ದಿಯಾ ಮಿರ್ಜಾ ಅವರ ಸ್ನೇಹಿತರು ಮದುವೆಯ ಫೋಟೋಗಳನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದಿಯಾ ಮಿರ್ಜಾ ನಟನೆ ಮಾಡಿದ್ದು ಬೆರಳೆಣಿಕೆಯಷ್ಟು ಚಿತ್ರದಲ್ಲಿ ರೆಹೆನಾ ಹೈ ತೇರೆ ದಿಲ್‌ ಮೇ ಅವರ ಉತ್ತಮ ಚಿತ್ರ. ಇನ್ನು ದಿಯಾ ಮಿರ್ಜಾ ಅವರಿಗೆ  ಇದು ಮೊದಲ ಮದುವೆಯೇನಲ್ಲ. ದಿಯಾ ಮಿರ್ಜಾ  ದೆಹಲಿ ಮೂಲದ ಉದ್ಯಮಿ ಸಾಹಿಲ್ ಸಂಘ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅದಕ್ಕೂ ಕೆಲ ವರ್ಷಗಳ ಹಿಂದಿನಿಂದ ಅವರಿಬ್ಬರೂ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದರು. ಆನಂತರದಲ್ಲಿ ಕುಟುಂಬದವರನ್ನೂ ಒಪ್ಪಿಸಿ 2014ರ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ  ಮದುವೆಯಾಗಿದ್ದರು.  2019ರಲ್ಲಿ ಇವರಿಬ್ಬರು ದಾಂಪತ್ಯದಲ್ಲಿ ಬಿರುಕು ಬಂದ ಹಿನ್ನೆಲೆಯಲ್ಲಿ ಇಬ್ಬರು ವಿವಾಹ ವಿಚ್ಛೇದನ ಪಡೆದಿದ್ದಾರೆ. ವಿಚ್ಚೇದನ ಪಡೆದ ಎರಡು ವರ್ಷಗಳ ಬಳಿಕ ಮತ್ತೊಂದು ಮದುವೆಯಾಗಿದ್ದಾರೆ…

About Author

Priya Bot

Leave A Reply