ಸ್ವಾತಂತ್ರ್ಯ ಭಾರತದ ವಜ್ರ – ವನ ಮಹೋತ್ಸವ

0

ಕತಾರ್  – ಭಾರತದ ರಾಯಭಾರಿ ರವರು ‘ಮರ ನೆಡುವಿಕೆ’ ಸಮಾರಂಭದಲ್ಲಿ ಭಾಗವಹಿಸಿದರು.  ಭಾರತದ 75 ವರ್ಷಗಳ ಸ್ವಾತಂತ್ರ್ಯ ಸ್ಮರಣಾರ್ಥವಾಗಿ ‘ ಆಜಾದಿ ಕಾ ಅಮೃತ್ ಮಹೋತ್ಸವ್ ‘ ಭಾರತೀಯ ಸಾಂಸ್ಕೃತಿಕ ಕೇಂದ್ರವು ವಿಶ್ವ ಪರಿಸರ ದಿನ ‘ ಯೋಜನೆಯನ್ನು ಆಚರಿಸುವ ಸಲುವಾಗಿ ಕತಾರದಾದ್ಯಂತ 75 ಮರಗಳನ್ನು ನೆಡುವ ಯೋಜಿಸಲಾಗಿತ್ತು.

ಐಸಿಸಿ ಆವರಣದಲ್ಲಿ ಮತ್ತು ವಿವಿಧ ಭಾರತೀಯ ಶಾಲೆಗಳಲ್ಲಿ ವಾರಪೂರ್ತಿ ಸಸಿಗಳನ್ನು ನೆಡುವ ಹಾಗೂ ಅದರ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.  ಸಂಭ್ರಮಾಚರಣೆಯ ಭಾಗವಾಗಿ, ಐಸಿಸಿಯು, ಸಾರ್ವಜನಿಕ ಉದ್ಯಾನವನಗಳ ಇಲಾಖೆ, ಕತಾರ ಪುರಸಭೆ ಮತ್ತು ಪರಿಸರ  ಮಂಡಳಿಯ ಸಹಯೋಗದೊಂದಿಗೆ ಮರ ನೆಡುವಿಕೆ  ಸಮಾರಂಭವನ್ನು ಮಾಮುರಾ ಪಾರ್ಕ್ನನಲ್ಲಿ 14 ನೇ ಜೂನ್ 2021 ರಂದು ಆಯೋಜಿಸಿತ್ತು.

ಘನವೆತ್ತ, ಭಾರತದ ರಾಯಭಾರಿ ಕತಾರ್ ‘ಗೆಗೌರವಾನ್ವಿತ, ಶ್ರೀ.ದೀಪಕ್ ಮಿತ್ತಲ್ ರವರು,  ಶ್ರೀ.ಎಸ್.ಕ್ಸೇವಿಯರ್ ಧನರಾಜ್ ಮೊದಲ ಕಾರ್ಯದರ್ಶಿ ಕಾನ್ಸುಲರ್ ಮತ್ತು ಸಮುದಾಯ ವ್ಯವಹಾರಗಳು, ಭಾರತದ ರಾಯಭಾರಿಯ ಜೊತೆಗೆ ಶ್ರೀ.ಮೊಹಮ್ಮದ್ ಇಬ್ರಾಹಿಂ ಅಲ್ ಸಾದ, ಸಾರ್ವಜನಿಕ ಉದ್ಯಾನವನ ಇಲಾಖೆಯ ಸಹಾಯಕ  ನಿರ್ದೇಶಕರು ‘ಮರ ನೆಡುವಿಕೆ’ ಸಮಾರಂಭದಲ್ಲಿ ಭಾಗವಹಿಸಿದರು.

ಮಾಧ್ಯಮ ಸಿಬ್ಬಂದಿಗಳಿಗೆ ತಮ್ಮ ಸಂದೇಶವನ್ನು ನೀಡುವ ಸಂದರ್ಭದಲ್ಲಿ ಗೌರವಾನ್ವಿತ, ಶ್ರೀ.ದೀಪಕ್ ಮಿತ್ತಲ್ ರವರು, ದೇಶದಾದ್ಯಂತ ಒಂದು ಮಿಲಿಯನ್ ಸಸಿ ನೆಡುವಿಕೆ ಗುರಿಯ ಪರಿಶ್ರಮವನ್ನು ಉತ್ತೇಜಿಸಿದ ಸಾರ್ವಜನಿಕ ಉದ್ಯಾನವನ ಇಲಾಖೆಯನ್ನು ಅಭಿನಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.  ಕತಾರಲ್ಲಿ ವಾಸಿಸುವ ಎಲ್ಲಾ ನಾಗರಿಕರು ಕತಾರ ಸರ್ಕಾರದ ಹಸಿರು ಪರಿಸರ ಪ್ರಚಾರದ ಪ್ರಯೋಜನವನ್ನು ಪಡೆಯುತ್ತಾರೆ.  ಗೌರವಾನ್ವಿತ ರಾಯಭಾರಿರವರು ಈ ವರ್ಷದ “ಪರಿಸರ ವ್ಯವಸ್ಥೆಯ ಮರುಸ್ಥಾಪನೆ” ಪ್ರಚಾರದ ಉದ್ದೇಶಗಳನ್ನು ಸಾಧಿಸಲು ಭಾರತೀಯ ಸಮುದಾಯದ ಬದ್ಧತೆಯ ಬಗ್ಗೆ ಪುನರುಚ್ಚರಿಸಿದರು.

ಶ್ರೀ.ಪಿ.ಎನ್.ಬಾಬು ರಾಜನ್ ಜೊತೆಗೆ ಶ್ರೀ.ಸುಬ್ರಮಣ್ಯ ಹೆಬ್ಬಾಗಿಲು (ವಿ ಪಿ), ಶ್ರೀ.ಕೃಷ್ಣ ಕುಮಾರ್ ಜಿ.ಎಸ್ ಮತ್ತು ಇತರ ವ್ಯವಸ್ಥಾಪಕ ಸಮಿತಿ ಸದಸ್ಯರುಗಳಾದ  ಅನಿಶ್ ಜಾರ್ಜ್ ಮ್ಯಾಥ್ಯೂ, ಅಫ್ಸಲ್ ಅಬ್ದುಲ್ಮಜೀದ್,  ಮತ್ತು ಸಜೀವ್ ಸತ್ಯಸೀಲನ್ ಉಪಸ್ಥಿತರಿದ್ದು,  ಕಾರ್ಯಕ್ರಮವನ್ನು ಬೆಂಬಲಿಸಿ ಸಹಕರಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply