ವಿಜಯಪುರ- ದೇವರ ಮೇಲೆ ಭಕ್ತಿ ಇರುವ ಭಕ್ತರು ದೇವರಲ್ಲಿ ಏನೆಲ್ಲಾ ಬೇಡಿಕೆ ಇಟ್ಟಿರುತ್ತಾರೆ ಎಂಬುದನ್ನು ನೀವು ನೋಡಿದ್ರೆ ಅಚ್ಚರಿಯಾಗುತ್ತಿರಾ. ಹೌದು ಇಲ್ಲೊಬ್ಬ ಭಕ್ತ ತಾನು ಸರಾಯಿ ಕುಡಿಯುತ್ತೆನೆ ಇಸ್ಪೇಟ್ ಜೂಜು ಆಡುತ್ತೆನೆ ದಯಮಾಡಿ ಬಿಡಿಸು ಎಂದು ದೇವರಿಗೆ ಪತ್ರ ಬರೆದಿದ್ದನೆ. ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸುಪ್ರಸಿದ್ಧ ಯಲಗೂರು ಆಂಜನೇಯ ದೇಗುಲದಲ್ಲಿ ಹುಂಡಿ ಹಣ ಎಣಿಕೆ ಮಾಡುತ್ತಿದ್ದ ವೇಳೆ ಹುಂಡಿಯಲ್ಲಿ ಹಣದ ಜೊತೆ ಭಕ್ತರು ಆಂಜನೇಯನಿಗೆ ಬರೆದ ಪತ್ರಗಳು ಲಭ್ಯವಾಗಿವೆ.
ನಾನು ಸಾರಾಯಿ ಕುಡಿಯುತ್ತೇನೆ, ಇಸ್ಪೀಟು, ಜೂಜು ಆಡುತ್ತೇನೆ. ಈ ದುಶ್ಚಟ ಬಿಡಿಸು ಎಂದು ಭಕ್ತನೊರ್ವ ಪತ್ರ ಬರೆದಿದ್ದಾನೆ. ಇನ್ನು ಮತ್ತಬ್ಬ ಭಕ್ತ ಒಂದು ವರ್ಷದಲ್ಲಿ ಸರ್ಕಾರಿ ನೌಕರಿ ಕೊಡಿಸು ನೌಕರಿ ಸಿಕ್ಕರೆ ಎರಡನೇ ಸಂಬಳ ನಿನಗೆ ಮೀಸಲು, ಅಲ್ಲದೆ ನಡೆದುಕೊಂಡು ಬಂದು ಹರಕೆ ತೀರುಸುತ್ತೇನೆ ಎಂದು ಪತ್ರ ಬರೆದಿದ್ದಾನೆ. ಇದೇ ರೀತಿ ಅನೇಕ ವಿಚಿತ್ರ ಪತ್ರಗಳು ಆಂಜನೇಯ ಕೃಪೆಗಾಗಿ ಹುಂಡಿಯಲ್ಲಿ ಸಿಕ್ಕಿವೆ.