ಅವಹೇಳನಕಾರಿ ಪೋಸ್ಟ್ ನಾಲ್ಕು ಜನರ ಬಂಧನ.

0

ಮಂಗಳೂರು- ಅವಹೇಳನಕಾರಿ ಪೋಸ್ಟ್ ಹಾಕಿದ ನಾಲ್ವರನ್ನು ಮಂಗಳೂರು ಪೊಲೀಸ್ರು ಬಂಧಿಸಿದ್ದಾರೆ. ಮಂಗಳೂರಿನ ವಿಎಚ್ ಪಿ ಮುಖಂಡ ಶರಣ್ ಪಂಪ್‌ವೆಲ್ ಹಾಗೂ ದುರ್ಗಾವಾಹಿನಿ ಸಂಘಟನೆಯ ಬಗ್ಗೆ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮೆಸೇಜ್ ಹಾಕಿದ ಕುರಿತಾದ ದೂರಿನ ಕುರಿತಂತೆ ನಾಲ್ವರನ್ನು ಬಂಧಿಸಲಾಗಿದೆ.ಬಂಧಿತರನ್ನು ಭವಾನಿ ಶಂಕರ್ (32), ನೌಶಾದ್ (27), ರವಿ ಅಲಿಯಾಸ್ ಟಿಕ್ಕಿ ರವಿ (38), ಹಾಗೂ  ಜಯಕುಮಾರ್ (33) ಎಂದು ಗುರುತಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಮಂಗಳೂರು ನಗರದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್,  ಬಂಧಿತರು ತಮಗೆ ಬಂದಿದ್ದ ಸಂದೇಶವನ್ನು  ಇತರ ಗ್ರೂಪ್ ಹಾಗೂ ಸ್ನೇಹಿತರಿಗೆ ಪಾರ್ವಾಡ್ ಮಾಡಿದ್ದಾರೆ. ಈ ಸಂದೇಶದ ಮೂಲ, ಸತ್ಯಾಸತ್ಯತೆ ಹಾಗೂ ಇತರರು ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತಂತೆ ತನಿಖೆ ನಡೆಯತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply