ಕೊಟ್ಟೂರಿಗೆ ಜಿಲ್ಲಾಧಿಕಾರಿ ಪವನ್ ಕುಮಾರ್ ಭೇಟಿ

0

ಕೊಟ್ಟೂರು: ಜೂನ್3ರಂದು ಸುರಿದ ಭಾರಿ ಪ್ರಮಾಣದ ಮಳೆಗೆ ಕೊಟ್ಟೂರು ಪಟ್ಟಣದ ಹ್ಯಾಳ್ಯ ರಸ್ತೆಯ ಅಂಬೇಡ್ಕರ್ ಕಾಲೋನಿಗೆ ಮಳೆ ನೀರ ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದ ಹಿನ್ನೆಲೆ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಕಾಲೋನಿಯ ಒಳಗಡೆ ವೀಕ್ಷಣೆ ಮಾಡಿದ ಅವರು ಮಳೆ ನೀರು ಕಾಲೋನಿಯ ಮನೆಗಳಿಗೆ ಪ್ರವೇಶಿಸಲು ಕಾರಣ ಏನು ಎಂದು ಸ್ಥಳೀಯ ಜನರನ್ನು ಪ್ರಶ್ನಿಸಿದರು ಊರಿನ ಪ್ರಮುಖ ಕಾಲುವೆಗಳು ತ್ಯಾಜ್ಯದಿಂದ ತುಂಬಿವೆ ಸರ್ ಮಳೆ ಬಂದಗಾ ನೀರು ಮುಂದಕ್ಕೆ ಹರಿಯದೇ ಕಾಲೋನಿಯೊಳಗಡೆ ನುಗ್ಗುತ್ತದೆ ಎಂದು ಜನರು ಉತ್ತರಿಸಿದರು. ಅಂಬೇಡ್ಕರ್ ನಗರದ ಮುಂದಿರುವ ಕಾಲುವೆಯನ್ನು ಸ್ವಚ್ಛಗೊಳಿಸಿ ಮತ್ತು ಕಾಲುವೆ ಅಗಲೀಕರಣ ಮಾಡುವಂತೆ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎಸ್ ಟಿ ಗಿರೀಶ್ ಅವರಿಗೆ ಸೂಚಿಸಿದರು.

ನಂತರ ಅಧಿಕಾರಿಗಳೊಂದಿಗೆ ಕಾಲೋನಿ ವೀಕ್ಷಣೆ ಮಾಡಿದಾಗ ಈ ವಾರ್ಡ್ ನಲ್ಲಿ ಸುಸಜ್ಜಿತವಾದ ರಸ್ತೆ, ಚರಂಡಿ ಇಲ್ಲದಿರುವುದನ್ನು ಗಮನಿಸಿದ ಅವರು ಕೂಡಲೇ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಸಮಸ್ಯೆಗಳನ್ನು ಬಗೆಹರಿಸುವಂತೆ ತಿಳಿಸಿದ ಅವರು ಮಳೆ ನೀರಿನಿಂದ ಹಾನಿಗೊಳಗಾದ ಮನೆಗಳ ಪಟ್ಟಿ ಮಾಡಿ ಬೇಕಾದ ಸವಲತ್ತುಗಳನ್ನು ನೀಡಿ ಎಂದು ಹೇಳಿದರು.

ಅಂಬೇಡ್ಕರ್ ನಗರದ ಸುತ್ತಲಿನ ವಾತಾವರಣ ನೋಡಿದರೆ ತಿಳಿಯುತ್ತದೆ ಈ ಕಾಲೋನಿಯ ಬಗ್ಗೆ ಸ್ಥಳೀಯ ಪ.ಪಂ ಆಡಳಿತ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಎಷ್ಟರಮಟ್ಟಿಗೆ ಕಾಳಜಿ ವಹಿಸಿಕೊಂಡಿದೆ ಎಂದು ತಿಳಿಯುತ್ತದೆ ಅಂಬೇಡ್ಕರ್ ನಗರ ಒಂದೇ ಅಲ್ಲ! ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳಿಲ್ಲಾದ ಎಲ್ಲಾ ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ಜಿ. ಅನಿಲ್ ಕುಮಾರ್ಪ,ಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಿರೀಶ್, ಸಿಪಿಐ ದೊಡ್ಡಣ್ಣ, ಪಿಎಸ್ಐ ನಾಗಪ್ಪ, ಕಂದಾಯ ನಿರೀಕ್ಷಕರು ಹಾಲಸ್ವಾಮಿ, ಗ್ರಾಮ ಲೆಕ್ಕಿಗರಾದ ಕೊಟ್ರೇಶ್, ರಮೇಶ, ಸೌಭಾಗ್ಯ ಇದ್ದರು.

IMG_20210605_110220-1.jpg

Email

Huligesh Tegginakeri

About Author

Huligesh Tegginakeri

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಕಳೆದ ಎಂಟು ವರ್ಷಗಳ ಕಾಲ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದೇನೆ.. ವಿಶೇಷ, ವಿಭಿನ್ನ ರೀತಿಯ ಸುದ್ದಿಗಳನ್ನು ಕಲೆಹಾಕಿ ಬರೆಯುವುದೇ ನನ್ನ ಹವ್ಯಾಸ..

Leave A Reply