ಹುಬ್ಬಳ್ಳಿ- ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹುಬ್ಬಳ್ಳಿ ಧಾರವಾಡ ನಡುವೆ ನಿರ್ಮಿಸಿರುವ ಕಿರಿದಾದ ಬೈಪಾಸ್ ನಲ್ಲಿ ಪದೇ ಪದೇ ಸಂಭವಿಸುವ ಭೀಕರ ಅಪಘಾತಗಳು ಅದೆಷ್ಟೋ ಜನರನ್ನು ಬಲಿ ಪಡೆದ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಇಂತಹ ಘಟನೆಗಳು ಇವತ್ತು ಇಡೀ ರಾಷ್ಟ್ರವೇ ಇತ್ತ ನೋಡುವಂತೆ ಮಾಡುತ್ತಿವೆ. ಇಷ್ಟಾದರೂ ನಮ್ಮ ಸರ್ಕಾರಗಳು ಇದಕ್ಕೊಂದು ಸ್ಪಷ್ಟವಾದ ಪರಿಹಾರ ಕಂಡುಕೊಳ್ಳದಿರುವುದು ಈ ಭಾಗದ ಜನರ ಭಾರಿ ಅಸಮಾಧಾನಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ, ನಾಳೆ ಸೋಮವಾರ ಜನೆವರಿ 18 ರಂದು ಗಬ್ಬೂರ ಬೈಪಾಸ್ ನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವ ಸಿದ್ಧತಾ ಸಭೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಶ್ರೀಮತಿ ತಾರಾದೇವಿ ವಾಲಿ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ನವೀದ್ ಮುಲ್ಲಾ. ನವನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಬಸವರಾಜ್ ಕಿತ್ತೂರ. ಡಿಸಿಸಿ ಕಾರ್ಯದರ್ಶಿಗಳಾದ ಶ್ರೀ ದುರ್ಗಪ್ಪ ಪೂಜಾರ.ಶ್ರೀ ಬಸವರಾಜ್ ಬೆಣಕಲ್. ಶ್ರೀ ಆರೀಫ ದೊಡ್ಡಮನಿ.ಶ್ರೀ ಗೋವಿಂದ ಬೇಲ್ಡೋಣಿ. ಸೇರಿದಂತೆ ಅನೇಕ ಜನ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.