ಬಳ್ಳಾರಿ-  ಸಚಿವ ಆನಂದ್ ಸಿಂಗ್ ಅದುಕೊಂಡ ಹಾಗೆ ಜಿಲ್ಲಾ ವಿಭಜನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 5  ತಾಲೂಕು ಹಾಗೂ ನೂತನ ವಿಜಯನಗರ ಜಿಲ್ಲೆಯಲ್ಲಿ 6 ತಾಲೂಕು ಒಳಗೊಂಡಿದೆ. ಆದ್ರೆ ಜಿಲ್ಲಾ ವಿಭಜನೆ ಬಳಿಕ ಯಾಯ ಜಿಲ್ಲೆಗೆ ಏನು ಸಿಕ್ಕಿದೆ ಎನ್ನುವ ಲೆಕ್ಕಾಚಾರ ಈಗ ಜೋರಾಗಿದೆ. ಅಲ್ಲದೇ ಜಿಲ್ಲಾ ವಿಭಜನೆ ಬಳಿಕ ರಾಜಕೀಯ ಲೆಕ್ಕಾಚಾರ ಸಹ ಈಗಾಗಲೇ ಆರಂಭವಾಗಿದೆ.

ಹಿಡಿದ ಹಟವನ್ನು ಆನಂದ್ ಸಿಂಗ್ ಬಿಡುವುದೇ ಇಲ್ಲಾ ಎನ್ನುವುದು ಜಿಲ್ಲಾ ವಿಭಜನೆ ಬಳಿಕ ಮತ್ತೊಂದು ಸಾರಿ ಸಾಬೀತಾಗಿದೆ. ಆಡಳಿತ ರೂಡ  ಸರ್ಕಾರವನ್ನು ಕೆಡವಿ ನೂತನ ಬಿಜೆಪಿ ಸರ್ಕಾರ ರಚನೆಗೆ ಕಾರಣ ಆನಂದ್ ಸಿಂಗ್ . ಆನಂದ್ ಸಿಂಗ್ ಅದುಕೊಂಡಂತೆ ಜಿಲ್ಲಾ ವಿಭಜನೆಯಾಗಿದೆ‌. ಆದ್ರೆ ಈಗ ಜಿಲ್ಲಾ ವಿಭಜನೆ ಬಳಿಕ ಯಾರಿಗೆ ಲಾಭ ಯಾರಿಗೆ ನಷ್ಟ ಎನ್ನುವ ಚರ್ಚೆಗಳು ಆರಂಭವಾಗಿವೆ.‌ ಇನ್ನು ರಾಜಕೀಯವಾಗಿ ನೋಡುವುದಾದ್ರೆ ಆನಂದ್ ಸಿಂಗ್ ಅವರು ನೂತನ ವಿಜಯನಗರ ಜಿಲ್ಲೆಯ ಅಧಿಪತಿಯಾಗಿದ್ದಾರೆ. 6 ತಾಲೂಕಿನಲ್ಲಿ ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇದೇ ಜಿಲ್ಲಾ ವಿಭಜನೆ ರಾಜಕೀಯ ದಾಳವಾಗಿರಲಿದೆ. ಬಿಜೆಪಿಗೆ ಈ ಆರು ತಾಲೂಕಿನಲ್ಲಿ ರಾಜಕೀಯ ಮಾಡಲು ಚುನಾವಣೆ ಎದುರಿಸಲು ಬಹುದೊಡ್ಡ ಅಸ್ತ್ರ ದೊರತಂತಾಗಿದೆ. ಹೀಗಾಗಿ ನೂತನ ಜಿಲ್ಲೆಯಲ್ಲಿ ಬಿಜೆಪಿಗೆ ಬಹುದೊಡ್ಡ ಶಕ್ತಿ ದೊರೆತಿದೆ. ನೂತನ ಜಿಲ್ಲೆಯ ಹೂವಿನ ಹಡಗಲಿ ಹಾಗು ಹಗರಿ ಬೊಮ್ಮನಹಳ್ಳಿಯಲ್ಲಿ ಮತ್ತೆ  ಬಿಜೆಪಿ ಬಾವುಟ ಹಾರಲು ಸಹಕಾರಿಯಾಗಲಿದೆ.

ಇನ್ನು ವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ನೋಡುವುದಾದರೆ. ಇಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಲಾಭ ಸಿಗುವುದು ಸರ್ವೇ ಸಾಮಾನ್ಯ. ಯಾಕೆಂದರೆ ಇಲ್ಲಿನ ಕಾಂಗ್ರೆಸ್ ಗೆ ಜಿಲ್ಲಾ ವಿಭಜನೆಯ ಅಸ್ತ್ರ ಸಗಲಿದೆ.‌ ಆನಂದ್ ಸಿಂಗ್ ಜಿಲ್ಲಾ ವಿಭಜನೆ ಮಾಡಿದ್ದಾರೆ. ‌ಇದೇ ಕಾರಣ ಇಟ್ಟುಕೊಂಡು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಬಹುದು. ‌ಇದು ಕೇವಲ ರಾಜಕೀಯ ‌ಲೆಕ್ಕಾಚಾರ ಆದ್ರೆ ಬೌಗೋಳಿಕವಾಗಿ ವಿಭಜಿತ ಎರಡೂ ಜಿಲ್ಲೆಯನ್ನು ನೋಡುವುದಾದರೆ. ಬಳ್ಳಾರಿ ಜಿಲ್ಲೆಗೆ‌ ಹೆಚ್ಚಿನ ಲಾಭ ಸಿಗಲಿದೆ. ಕಾರಣ ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನೀರಾವರಿಯ ಸೌಲಭ್ಯಗಳಿವೆ. ಆದ್ರೆ ವಿಜಯನಗರ ಜಿಲ್ಲೆಯ ಹೊಸಪೇಟೆ ಹೂವಿನ ಹಡಗಲಿ ಸ್ವಲ್ಪ ಭಾಗ ಬಿಟ್ಟು , ಕೂಡ್ಲಿಗಿ ಹಗರಿ ಬೊಮ್ಮನಹಳ್ಳಿ ತಾಲೂಕಿನಲ್ಲಿ ನೀರಾವರಿ ಸೌಲಭ್ಯ ಇಲ್ಲಾ. ಮೇಲಾಗಿ ಇಲ್ಲಿನ ಬಹುತೇಕ ಜನರ ಕೆಲಸ ಇಲ್ಲದೇ ಪ್ರತಿ ವರ್ಷ ಸಾವಿರಾರು ಜನರು ಗೂಳೆ ಹೋಗುತ್ತಾರೆ. ಹೀಗಾಗಿ ಬಳ್ಳಾರಿಗೆ ಹೋಲಿಕೆ ಮಾಡಿಕೊಂಡರೆ ವಿಜಯನಗರ ಜಿಲ್ಲೆ, ಸಂಪತ್ತಿನ ಕೃಡಿಕರಣ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇನ್ನು ಜಿಲ್ಲೆಯ ಡ ಎಮ್ ಎಫ್, ಫಂಡ್ ( ಜಿಲ್ಲಾ ಖನಿಜ ನಿಧಿ)  ನಲ್ಲಿ ಸಹ ಸಿಂಹ ಪಾಲು ಬಳ್ಳಾರಿ ಜಿಲ್ಲೆಗೆ ಸಿಗಲಿದೆ. ಶೇಕಡಾ 20 ರಷ್ಟು ಮಾತ್ರ ನೂತನ ಜಿಲ್ಲೆಗೆ ದೊರೆಯಲಿದೆ. ಹೀಗಾಗಿ ನೂತನ ವಿಜಯನಗರ ಜಿಲ್ಲೆಗೆ ಸಾಕಷ್ಟು ಸವಾಲು ಎದುರಾಗಲಿವೆ.

ಅಂದುಕೊಂಡ ಹಾಗೆ ಸಚಿವ ಆನಂದ್ ಸಿಂಗ್ ಜಿಲ್ಲಾ ವಿಭಜನೆ ಮಾಡಿದ್ದಾರೆ. ಆದ್ರೆ ಜಿಲ್ಲಾ ವಿಭಜನೆ ಬಳಿಕ ಆನಂದ್ ಸಿಂಗ್ ಅವರು ಸಂಪೂರ್ಣ ಜಿಲ್ಲೆಯ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಕೊಡಬೇಕಿದೆ. ಆಗಲೇ ಮಾತ್ರ ಜಿಲ್ಲಾ ವಿಭಜನೆ ಮಾಡಿದ್ದು ಸಾರ್ಥಕವಾಗಲಿದೆ.

About Author

Priya Bot

Leave A Reply