ಹಿಡಿದ ಹಟ ಬಿಡದೇ ದಾಖಲೆ ಬರೆದ ದಿವ್ಯಾ

0

ಬೆಂಗಳೂರು –  ಬಿಗ್ ಬಾಸ್ ಸಿಸನ್ 8 ಆರಂಭ ಆದಾಗಿನಿಂದ ಒಂದಾದರೊಂದು ಸುದ್ದಿಯಲ್ಲಿ ಇರುವ ದಿವ್ಯಾ ಉರುಡುವ ಇದೀಗ್ ಮತ್ತೆ ಸುದ್ದಿಯಲ್ಲಿದ್ಧಾರೆ.  ಮೊದಲ ಬಾರಿಗೆ ಮಹಿಳಾ ಕ್ಯಾಪ್ಟನ್ ಆಗಿ  ಕಿರೀಟವನ್ನು ಮಡಿಗೆರಿಸಿಕೊಂಡಿದ್ಧಾರೆ. ಬಿಗ್ ಬಾಸ್ ಮನೆಯಲ್ಲಿ  ಇದುವೆಗೂ ಮಹಿಳಾ ಕ್ಯಾಪ್ಟನ್ ಆಡಳಿತ ನೋಡದ ಬಿಗ್ ಬಾಸ್ ಸೀಸನ್ 8 ರಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದಿವ್ಯಾ ಹೊರ ಹೊಮ್ಮಿದ್ದಾರೆ.

ಕಳೆದ ವಾರದ ವಾರದ ಕಥೆ ಕಿಚ್ಚನ್ ಜೊತೆ  ಎಪಿಸೋಡನಲ್ಲಿ ಚರ್ಚೆ ಆದಂತೆ ಇದುವರೆಗೂ ಕೂಡಾ ಯಾರು ಕ್ಯಾಪ್ಟನ್ ಆಗದಿರುವುದಕ್ಕೆ ಕಾರಣ ಏನೆಂದು ಯಾರಿಗೂ ಗೊತ್ತಾಗಿಲ್ಲಾ ಎಂದು ಸುದೀಪ್ ಅವರೂ ಸ್ಪರ್ಧಿಗಳಲ್ಲಿ ಕೇಳಿದ್ದರು. ಆಗ ದಿವ್ಯಾ ಅದಕ್ಕೆ ಉತ್ತರ ಕೊಟ್ಟಿದ್ದರು.

ಹೊದವಾರ ಮಂಜು ಕ್ಯಾಪ್ಟನ್ ಆದಾಗ ದಿವ್ಯಾ ಉರುಡುಗ ಅವರು ತಮ್ಮ ಆಸೆಯನ್ನು ಹೊರ ಹಾಕಿದ್ದರು. ಬಿಗ್ ಬಾಸ್ ಮನೆಯ ಸೀಸನ್ 8 ಮೊದಲ ಮಹಿಳಾ ಕ್ಯಾಪ್ಟನ್ ನಾನೆ ಆಗಬೇಕು ಎಂದರು. ಈ ವಾರ ಅದನ್ನು ಅವರು ಸಾಧಿಸಿ ತೋರಿಸಿದ್ದಾರೆ.  ಕ್ಯಾಪ್ಟನ್ಸಿ ಟಾಸ್ಕಗೆ ಆಯ್ಕೆಯಾದ ಸೂರ್ಯಸೇನೆ ತಂಡಕ್ಕೆ ಬಿಗ್ ಬಾಸ್, ಹಾಕಿರುವ ಬಟ್ಟೆ ಮೇಲೆ ಯಾರು ಅತೀ ಹೆಚ್ಚು ಬಟ್ಟೆ ಹಾಕುತ್ತಾರೋ ಅವರೇ ವಿನ್ನರ್ ಅಂತಾ ಸೂಚಿಸಿದ್ದರು. ಈ ಟಾಸ್ಕ್ ನಲ್ಲಿ ದಿವ್ಯಾ ಉರುಡುಗ್ ಅವರು 84 ಬಟ್ಟೆಗಳನ್ನು ಧರಿಸಿ ವಿನ್ನ ಆಗಿ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಇದಕ್ಕೆ ಸಂತಸ ವ್ಯಕ್ತ ಪಡಿಸಿ. ತಮ್ಮ ಗೆಲುವನ್ನು ಮನೆಯ ಉಳಿದ ಎಲ್ಲ ಮಹಿಳಾ ಸ್ಪರ್ಧಿಗಳಿಗೆ ಅರ್ಪಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply