ಬೆಂಗಳೂರು- ಕನಕಪುರ ಬಂಡೆ ಖ್ಯಾತಿಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಗಳ ಮದುವೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಆಗಮಿಸಿ ವಧು-ವರರರಿಗೆ ಶುಭ ಹಾರೈಸಿದ್ದಾರೆ.ನಿ
ನಿನ್ನೆ ಸಂಜೆ ದೆಹಲಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅವರು, ಅಲ್ಲಿಂದ ರಾಹುಲ್ ಗಾಂದಿ ಹಾಗೂ ಪ್ರಿಯಾಂಕಾ ರೆಸಾರ್ಟಿಗೆ ತೆರಳಿದ್ದಾರೆ. ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ರೆಸಾರ್ಟ್ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ರಾಹುಲ್ ಗಾಂದಿ ಡಿಕೆಸಿ ಅವರ ಮಗಳ ಆರಕ್ಷತೆಗೆ ಬರುವ ಹಿನ್ನೆಲೆಯಲ್ಲಿ ರೆಸಾರ್ಟಿನಲ್ಲಿ ಕೆಲಸ ಮಾಡುತ್ತಿರುವ ಸುಮಾರು 70 ಮಂದಿ ಸಿಬ್ಬಂದಿಗೆ ಕಡ್ಡಾಯವಾಗಿ ರಜೆ ನೀಡಿದ್ದರು. ಸುಮಾರು 70 ಜನ ಸಿಬ್ಬಂದಿಗೆ ಸೋಮವಾರದಿಂದಲೇ ರಜೆ ನೀಡಲಾಗಿತ್ತು. ಯಾಕಂದರೆ ಕಾರ್ಯಕ್ರಮದ ಯಾವುದೇ ವೀಡಿಯೋ, ಫೋಟೋ ಹಾಗೂ ಮಾಹಿತಿ ಸೋರಿಕೆಯಾಗದಿರಲಿ ಎಂಬ ನಿಟ್ಟಿನಲ್ಲಿ ರಜೆ ಘೋಷಿಸಲಾಗಿತ್ತು….