ಡಿಕೆಶಿ ರೌಡಿ ಮಾತ್ರವಲ್ಲ,…. : ನಳೀನ್ ಕುಮಾರ್ ಕಟೀಲ್

0

ಮಂಗಳೂರು  – ಡಿ.ಕೆ.ಶಿವಕುಮಾರ್ ಕಾರ್ಯಕರ್ತನ ಮೇಲೆ ಕೈ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ  ಮಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆಶಿ ರೌಡಿ ಮಾತ್ರವಲ್ಲ, ಕೆಟ್ಟ ದಾಳಿಗಳಿಗೆ ಪ್ರೇರಣೆ ನೀಡಿದ್ದಾರೆ. ಕಾಂಗ್ರೆಸ್ ನವರ ಇತಿಹಾಸವನ್ನ ನೋಡಿದ್ರೆ ಗೊತ್ತಾಗುತ್ತೆ ಕಾರ್ಯಕರ್ತರು ನಾಯಕರ ಬಳಿ ಅಪೇಕ್ಷೆ ಮತ್ತು ಬೇಡಿಕೆಯಿಟ್ಟು ಬರುತ್ತಾರೆ ಎಂಬುದನ್ನು. ಅವರ ಮೇಲೆ ಹಲ್ಲೆ ಮಾಡುವುದು ಸರಿಯಾದ ಸಂಸ್ಕೃತಿ ಅಲ್ಲ‌ ಇದು ಕಾಂಗ್ರೆಸ್ ನಾಯಕರುಗಳ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಕಿಡಿಕಾರಿದ ಅವರು,

ಸಿದ್ರಾಮಣ್ಣ ಹಿಂದೆ ತೊಡೆ ತಟ್ಟಿ ವಿಧಾನಸೌಧ ಒಳಪ್ರ ವೇಶಿಸಿದವರು. ದೇವಸ್ಥಾನ ಎಂದು ಕರೆಯಲ್ಪಡುವ ವಿಧಾನಸೌಧಕ್ಕೆ ಯುದ್ಧಕ್ಕೆ ಬಂದಹಾಗೇ ಬಂದ್ರು. ಈ ಮೂಲಕ ವಿಧಾನಸೌಧಕ್ಕೆ ಅಗೌರವ ತೋರಿದ್ದರು‌ ಇನ್ನೂ ಕಾರ್ಯಕರ್ತರಿಗೆ ಗೌರವ ತೋರಿಸುತ್ತಾರೆ ಎಂದು ಕಿಡಿಕಾರಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply