ಬಳ್ಳಾರಿ-  ಕಳೆದ ಹತ್ತು ತಿಂಗಳ ಕರೋನಾ ಮಾಹಾ ಮಾರಿಯ ವಿರುದ್ಧದ ಹೋರಾಟದಲ್ಲಿ ಭಾರತ ಗೆಲವು ಸಾದಿಸಿದೆ. ಆದ್ರೆ ಕರೋನಾ ಸೋಂಕಿಗೆ ಲಸಕಿ ಸಿಕ್ಕಿದೆ ಆದ್ರೆ ಆ ಲಸಿಕೆಯನ್ನು ಯಾರಿಗೆ‌ ಮತ್ತು ಹೇಗೆ ನೀಡಬೇಕು ಎನ್ನುವುದು ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲು . ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಕರೋನಾ ಲಸಿಕೆ ಹಂಚಿಕೆ ಮಾಡಲು ಆರೋಗ್ಯ ಇಲಾಖೆ ಸಂಪೂರ್ಣ ಸಿದ್ದವಾಗಿದೆ.‌ ಬಳ್ಳಾರಿ ನಗರ ಸೇರಿದಂತೆ ನಗರ ಪ್ರದೇಶದಲ್ಲಿ ಲಸಕೆ  ಹಂಚಿಕೆ ಮಾಡಲು ಈಗಾಗಲೇ ಆರೋಗ್ಯ ಇಲಾಖೆ ತಯಾರಿ ನಡೆಸಿದೆ. ಆದ್ರೆ ಗ್ರಾಮೀಣ ಪ್ರದೇಶಗಳಲ್ಲಿ ಲಸಕೆ ಹಂಚಿಕೆ ಮಾಡುವುದು ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಮಾದರ ಆರೋಗ್ಯ ಕೇಂದ್ರ ಹೇಗಿರಬೇಕು ಎಂದು ಕೇಂದ್ರ ಸರ್ಕಾರ ಈಗಾಗಲೇ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು ಲಸಿಕೆ ಕೊಡುವ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಟ  ಮೂರು ಕೊಟ್ಟಡಿ ಇರಲೇ ಬೇಕು ಜೊತೆಯಲ್ಲಿ ಆಸ್ಪತ್ರೆಗೆ ಒಂದು ಎಂಟ್ರಿ ಹಾಗೂ ಒಂದು ಎಕ್ಸಿಟ್ ಇರಲೇಬೇಕು ಎಂದು ಸರ್ಕಾರ ನಿಯಮ ಮಾಡಿದೆ. ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ಒಂದು ಜಿಲ್ಲಾ ಆಸ್ಪತ್ರೆ ಒಂದು ವಿಮ್ಸ್ ಸೇರಿದಂತೆ ಒಟ್ಟು 92 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಿವೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಒಟ್ಟು  17683 ಜನರಿಗೆ ಲಸಿಕೆ ನೀಡಲು ತಯಾರಿ ನೆಡಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಹಾಗೂ ಡಾಕ್ಟರ್ ಗಳಿಗೆ ಲಸಿಕೆ ನೀಡಲು ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ….

About Author

Priya Bot

Leave A Reply