ಜಮ್ಮು- ಪ್ರವಾಸಿಗರ ಸ್ವರ್ಗ್ ಎಂದೇ ಖ್ಯಾತಿ ಪಡೆದಿರುವ ಜಮ್ಮು ಕಾಶ್ಮಿರದಲ್ಲಿ ಈಗ ಮಂಜಿನಿ ಸಿಂಚನ ಆರಂಭವಾಗಿದೆ. ಪ್ರತಿ ವಸಂತದಲ್ಲೂ ಒಂದೊಂದು ರೀತಿಯಲ್ಲಿ ಬದಲಾಗುವ ಕಾಶ್ಮೀರದ ಸೌಂದರ್ಯವನ್ನು  ಸವಿದವರಿಗೆ ಗೊತ್ತು ಅದರ ಗಮತ್ತು. ಈ ಕಾಶ್ಮೀರದ  ಹೋಟೆಲ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಹೋಟೆಲ್ ಎಂದ್ರೆ ಸಾಕು ನಮಗೆ‌ ನೆನಪಿಗೆ ಬರುವುದು ದೊಡ್ಡ ಕಟ್ಟಡ ಆಂಟಿಕ್ ಪರಿಕರಗಳು ಹೀಗೆ ತೀರಾ ಅಪರೂಪದ ವಸ್ತುಗಳನ್ನು ಬಳಸಿ ಹೋಟೆಲ್ ನಿರ್ಮಾಣ ಮಾಡಿರುತ್ತಾರೆ. ಆದ್ರೆ ಕಾಶ್ಮೀರದಲ್ಲಿ ಒಂದು ಹೋಟೆಲ್ ಸ್ವಲ್ಪ ಡಿಫ್ರೆಂಟಾಗಿ ಹಿಮದಿಂದಲೇ ಕೆಫೆಯೊಂದನ್ನ ನಿರ್ಮಿಸಲಾಗಿದೆ. ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ 22 ಅಡಿ ಅಗಲ ಹಾಗೂ 12.5 ಅಡಿ ಎತ್ತರದ ಕೆಫೆ ನಿರ್ಮಿಸಲಾಗಿದೆ. ಇಲ್ಲಿ ಏಕಕಾಲಕ್ಕೆ 16 ಜನರಿಗೆ ಪ್ರವೇಶ ಕಲ್ಪಿಸಲಾಗಿದೆ. ಇದನ್ನು 15 ದಿನಗಳವರೆಗೆ 20 ಜನರ ತಂಡ ನಿರ್ಮಿಸಿದೆ. ಟೇಬಲ್, ಕುರ್ಚಿಗಳನ್ನು ಐಸ್ ಹಾಗೂ ಹಿಮದಿಂದ ತಯಾರಿಸಲಾಗಿದೆ. ಒಳಾಂಗಣವನ್ನು ಕಾಶ್ಮೀರಿ ಕಲಾಕೃತಿಗಳಿಂದ ಅಲಂಕೃತಗೊಳಿಸಲಾಗಿದೆ. ಮಂಜಿನಿಂದ ನಿರ್ಮಾಣದ ಟೇಬಲ್ ಜೇರ್ ಗಳ ಮೇಲೆ ಕುಳಿತು ಬಿಸಿ ತಿಂಡಿ ಟೀ ಕಾಫಿ ಕುಡಿಯುವ ಮಜವೇ ಬೇರೆ.

About Author

Priya Bot

Leave A Reply