ನವದೆಹಲಿ-  ವಿಶ್ವವನ್ನು ಕಾಡುತ್ತಿರುವ ಕರೋನಾ ಎಂಬ ಹೆಮ್ಮಾರಿಯ ವಿರುದ್ದ ಈಗ ಸಮರ ಸಾರುವ ಕಾಲ. ಹೌದು ಕಳೆದ ಒಂದು ವರ್ಷಗಳ ಸತತ ಹೋರಾಟದ ಬಳಿಕ ಕೊನೆಗೂ ಕರೋನಾ ಹೆಮ್ಮಾರಿಗೆ ಈಗ‌ ಲಸಿಕೆ ಲಭ್ಯವಾಗಿದೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಲಸಿಕೆ ಕಂಡು ಹಿಡಿದಿದ್ದು ಅದನ್ನು ಜನರಿಗೆ ಹಂಚಿಕೆ ಮಾಡಲು ಮುಂದಾಗಿದೆ. ಆದ್ರೆ ಈ ಮದ್ಯ ಭಾರತ ಸೇರಿದಂತೆ ಕೆಲ  ರಾಷ್ಟ್ರದಲ್ಲಿ  ಲಸಿಕೆಯ ಬಗ್ಗೆ ಕೆಲವರು  ಅಪಪ್ರಚಾರ ಮಾಡುತ್ತಿದ್ದಾರೆ. ನಾವೀಗ ಲಸಿಕೆ ಹಾಕಿಸಿ ಕೊಳ್ಳಾಲಾ, ಮೊದಲು ಮೋದಿ‌ ಲಸಿಕೆ ಹಾಕಿಸಿಕೊಳ್ಳಲಿ ಎಂದೆಲ್ಲಾ ಅಪಪ್ರಚಾರಗಳು ದೇಶದಲ್ಲಿ ನಡೆಯುತ್ತಿವೆ. ಈ ಮದ್ಯ ಮೊದಲ ಬಾರಿಗೆ ಚಿತ್ರ ನಟಿ ಒಬ್ಬರು ಕರೋನಾ ಲಸಿಕೆ ಹಾಕಿಸಿ ಕೊಂಡು , ನಾನು ಲಸಿಕೆ ಹಾಕಿಕೊಂಡೆ ಅಲ್ಲದೆ ನಾನೂ ಆರಾಮಗಿ ಇರುವೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಒಂದನ್ನು ಹಂಚಿಕೊಂಡಿದ್ದಾರೆ.‌ ಹೌದು ಮುಂಬೈ ಮೂಲದ ನಟಿ ಶಿಲ್ಪ ಶಿರೋಡ್ಕರ್ ಲಸಿಕೆ ಹಾಕಿಸಿ ಕೊಳ್ಳುವ ಮೂಲಕ ಲಸಿಕೆ ಹಾಕಿಸಿಕೊಂಡ ಮೊದಲ ಸೆಲೆಬ್ರಿಟಿ ಎಂಬ ಹೆಗ್ಗಳಿಕೆ ಇವರದ್ದಾಗೆ. ಮುಂಬೈನ ನಿವಾಸಿಯಾಗಿದ್ದ ಇವರು ಸದ್ಯ ಅರಬ್ ನಲ್ಲಿ ವಾಸವಾಗಿದ್ದು, ಅರಬ್ ನಲ್ಲಿ ಲಸಿಕೆ ಹಾಕಿಸಿಕೊಂಡು , ಲಸಿಕೆ ಹಾಕಿಸಿಕೊಂಡ ದೇಶದ ಮೊದಲ ಚಿತ್ರನಟಿ ಇವರು….

Leave A Reply