ಗ್ರಾಮಗಳಿಗೆ ವರವಾದ ವೈದ್ಯರ ನಡೆ

0

ಧಾರವಾಡ-  ಧಾರವಾಡ ಜಿಲ್ಲೆಯಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮಗಳ ಜನಸಂಖ್ಯೆ ಆಧಾರಿಸಿ ಆರೋಗ್ಯ ಇಲಾಖೆ ತಾಲೂಕುವಾರು ವೈದ್ಯರ ತಂಡವನ್ನು ನೇಮಿಸಿದೆ. ಗ್ರಾಮಗಳಿಗೆ ತೆರಳುವ ತಂಡದಲ್ಲಿ ಇಬ್ಬರು ವೈದ್ಯರು ಹಾಗೂ ಒಬ್ಬ ಸಹಾಯಕ ಸಿಬ್ಬಂದಿ ಕೆಲಸ ನಿರ್ವಹಸುವರು. ಅಗತ್ಯ ವೈದ್ಯಕೀಯ ಪರಿಕರ ಹಾಗೂ ಔಷಧಗಳನ್ನು‌ ತಂಡ ಗ್ರಾಮಗಳಿಗೆ ಕೊಂಡ್ಯುವುದು. ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ತಂಡ ಗ್ರಾಮಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿದೆ. ಜಿಲ್ಲೆಯಲ್ಲಿ 68 ಹಳ್ಳಿಗಳಗೆ ಭೇಟಿ ನೀಡಿರುವ ವೈದ್ಯರ ತಂಡ, 5700 ಕೋವಿಡ್ ಆರ್.ಟಿ.ಪಿ.ಸಿ.ಆರ್, 2500 ಕೋವಿಡ್ ರ್ಯಾಟ್ ಪರೀಕ್ಷೆಗಳನ್ನು ನೆಡೆಸಿದೆ. ಇದರೊಂದಿಗೆ 9000 ಅಧಿಕ ಜನರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಹಾಗೂ ಔಷಧಗಳನ್ನು ವಿತರಿಸಲಾಗಿದೆ. ಕಿಮ್ಸ್ ಹಾಗೂ ಎಸ್.ಡಿ.ಎಂ. ವೈದ್ಯಕೀಯ ಕಾಲೇಜುಗಳಿಂದ ಗ್ರಾಮೀಣ ಭಾಗಗಳಿಗೆ‌ ಹೆಚ್ಚಿನ ವೈದ್ಯರ ತಂಡ ನೇಮಿಸಿರುವುದರಿಂದ ಇನ್ನೂ ಹೆಚ್ಚಿನ ವೈದ್ಯರ ಸೇವೆ ಗ್ರಾಮೀಣ ಜನರಿಗೆ ಲಭಿಸಿದಂತಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಶವಂತ ಮದೀನಕರ ಮಾಹಿತಿ ನೀಡಿದರು.

ಈ‌ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿ.ಪಂ.ಸಿ.ಇ.ಓ ಡಾ.ಬಿ ಸುಶೀಲ, ಕಿಮ್ಸ್ ನಿರ್ದೇಶಕ‌ ಡಾ.ರಾಮಲಿಂಗಪ್ಪ ಅಂಟರಠಾಣಿ, ಕಿಮ್ಸ್ ಆಡಳಿತಾಧಿರಿ ರಾಜಶ್ರೀ ಜೈನಾಪುರ, ವೈಧ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್, ಆರ್.ಸಿ.ಹೆಚ್.ಓ.‌ಡಾ.ಎಸ್.ಎಂ.ಹೊನಕೇರಿ, ತಾಲೂಕು ವೈದ್ಯಾಧಿಕಾರಿ ಆರ್.ಎಸ್.ಹಿತ್ತಲಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply