ಜಿಲ್ಲಾಡಳಿತಕ್ಕೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ ವೈದ್ಯಕೀಯ ಸಾಮಗ್ರಿಗಳ  ದೇಣಿಗೆ

0

ವಿಜಯಪುರ – ಪ್ರೋಗ್ರಾಮ್ ಮ್ಯಾನೇಜರ್, ವರ್ಲ್ಡ ವಿಷನ್ ಇಂಡಿಯಾ ಎಡಿಪಿ,  ಸಂಸ್ಥೆ ,ವಿಜಯಪುರ ಇವರವತಿಯಿಂದ  ಆಕ್ಸಿಜನ್ ಕಾನ್ಸನ್ಟರೇಟರ್ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಕೋವಿಡ್ – 19 ರೋಗಿಗಳ ಚಿಕಿತ್ಸೆಗಾಗಿ ನೀಡಿದ್ದು,ಅವುಗಳನ್ನು ಸಂಬಂಧಿಸಿದ ಆಸ್ಪತ್ರೆಗಳಿಗೆ ಹಸ್ತಾಂತರಿಸಿದೆ  ಎಂದು ಜಿಲ್ಲಾಧಿಕಾರಿಗ ಪಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಎಪ್ರಿಲ್, ಮೇ , ಜೂನ್ ಹಾಗೂ ಜುಲೈ ತಿಂಗಳಲ್ಲಿ ಕೋವಿಡ್ -19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಕೆಲವು ವಿವಿಧ ಸಂಘ -ಸಂಸ್ಥೆಗಳು ದಾನಿಗಳು ಸ್ವಯಂ ಪ್ರೇರಿತವಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಕೋವಿಡ್ – 19 ರೋಗಿಗಳ ಚಿಕಿತ್ಸೆಗಾಗಿ ನೀಡಲಾಗಿದೆ.

ಅದರಂತೆ ಇಂದು  ಪ್ರೋಗ್ರಾಮ್ ಮ್ಯಾನೇಜರ್ ವರ್ಲ್ಡ ವಿಷನ್ ಇಂಡಿಯಾ ಎಡಿಪಿ, ವಿಜಯಪುರ ಇವರು  ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಕೋವಿಡ್ – 19 ರೋಗಿಗಳ ಚಿಕಿತ್ಸೆಗಾಗಿ ನೀಡಿರುತ್ತಾರೆ. ಈ ಸಾಮಗ್ರಿಗಳನ್ನು ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಲಾಗಿದು ಮುಂದಿನ ದಿನಗಳಲ್ಲಿ ಈ ವೈದ್ಯಕೀಯ ಸಾಮಗ್ರಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಜಿಲ್ಲಾ ಆಸ್ಪತ್ರೆ/ ತಾಲೂಕ ಆಸ್ಪತ್ರೆಗಳಿಗೆ ಹಂಚಲಾಗುವುದು.

ವೈದ್ಯಕೀಯ ಸಾಮಗ್ರಿಗಳಾದ ಆಕ್ಸಿಜನ್ ಕಾನ್ಸನ್ಟ್ರೇಟರ್ : 10, ಕರೆಗೆಟೆಡ್ ಬೆಡ್ ಸೆಟ್ :10, ಹಾಗೂ ಪಿಪಿಇ ಕಿಟ್ಸ್ 230, N95 ಮಾಸ್ಕ್:450, ಗ್ಲೋವ್ಸ್ :450, ಫ್ಲೋರ್ ಕ್ಲೀನರ್ಸ್ :10, ಪಲ್ಸ್ ಆಕ್ಸಿ ಮೀಟರ್:10, ಸ್ಯಾನಿಟೈಸರ್:450, ಇನ್ಫ್ರೇರ್ಡ ಥರ್ಮೋಮೀಟರ್ :5 ನೀಡಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply