ಬಳ್ಳಾರಿ – ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮಕ್ಕೆ ಡಿ29ರಂದು ಹೊಸ್ಥಿಲ ಹುಣ್ಣಿಮೆಯಂದು, ಅಸಂಖ್ಯಾತ ಭಕ್ತರು ಶ್ರೀಮರುಳಸಿದ್ದೇಶ್ವರ ದೇವರ ದೇವರ ದರ್ಶನ ಪಡೆಯಲು ಅಗಮಿಸಿದ್ದರು. ಶ್ರೀಮದ್ ಉಜ್ಜಿನಿ ಸದ್ದರ್ಮ ಮಹಾಪೀಠದ ಜಗದ್ಗುರು, ಶ್ರೀಸಿದ್ದಲಿಂಗ ರಾಜದೇಶೀಕೆಂದ್ರ ಶಿವಾಚಾರ್ಯಶ್ರೀಗಳಿಂದ ಭಕ್ತರು ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ನೆರೆದ ಭಕ್ತರಿಗೆ ಹಿತನುಡಿಗಳನ್ನು ಹೇಳಿದರು, ಕೊರೋನಾ ದಂತಹ ರೋಗಗಳಿಗೆ ಅನಗತ್ಯ ಭಯ ಭೀತರಾಗಬಾರದು. ಬದಲಾಗಿ ಆರೋಗ್ಯ ಇಲಾಖೆ ಸೂಚಿಸಿರುವ ಅಗತ್ಯ ನಿಯಮಗಳನ್ನು,ಎಲ್ಲರೂ ಚಾಚು ತಪ್ಪದೇ ಪಾಲಿಸಬೇಕು ಹಾಗೂ ಸೂಕ್ತ ಜಾಗ್ರತೆ ಹೊಂದಬೇಕು ಎಂದು ಭಕ್ತರಿಗೆ ಶ್ರೀಗಳು ಕರೆ ನೀಡಿದರು.

Leave A Reply