ತುಮಕೂರು -ಕಾಲೇಜು ಹಾಸ್ಟೆಲ್ ನಲ್ಲಿ ಇದ್ದು ಕಲಿತ ವಿದ್ಯಾರ್ಥಿಗಳಿಗೆ ಈ ಅನುಭವ ಆಗಿಯೇ ಇರುತ್ತೆ. ಸಾಮಾನ್ಯವಾಗಿ ಕಾಲೇಜ್ ಹಾಸ್ಟೆಲ್ ಎಂದರೆ ಅಲ್ಲಿ ಸೀನಿಯರ್ ಜೂನಿಯರ್ ಎಂಬ ಎರಡು ಗುಂಪು ಇದ್ದೇ ಇರುತ್ತದೆ. ಇದರ ಜೊತೆಯಲ್ಲಿ ಮತ್ತೊಂದು ಗುಂಪು ಸಹ ಇರುತ್ತೆ. ಅದು ಸೂಪರ್ ಸೀನಿಯರ್ ಗುಂಪು. ಈ ಗುಂಪು ಸಾಮಾನ್ಯವಾಗಿ ಕಾಲೇಜ್ ಮುಗಿಸಿದವರು ಇಲ್ಲವೇ ಕಾಲೇಜ್ ಬಿಟ್ಟವರು ಇಲ್ಲವೇ ಪೇಲ್ ಆದವರು ಇದ್ದೇ ಇರುತ್ತಾರೆ. ಹೀಗೆ ಕಾಲೇಜ್ ನಲ್ಲಿ ಇರುವ ಬಹುತೇಕರ ಊಟ ಎಲ್ಲವೂ ಕಾಲೇಜ್ ಹಾಸ್ಟೆಲ್ ನಲ್ಲಿಯೇ‌. ಹಾಗೆಂದ ಮಾತ್ರಕ್ಕೆ ಪೇಲ್ ಆದ ಇಲ್ಲವೇ ಕಾಲೇಜ್ ಬಿಟ್ಟವರು ಎಲ್ಲರೂ ಇಲ್ಲೆ ಇರುತ್ತಾರೆ ಎಂದು ಅರ್ಥ ಅಲ್ಲಾ , ಈ ರೀತಿಯಲ್ಲಿ ಕಾಲೇಜ್ ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿಗಳಿಗೆ ತುಮಕೂರಿನ ಯುನಿವರ್ಸಿಟಿ ಹಾಸ್ಟೆಲ್ ವಾರ್ಡನ್ ಹಾಸ್ಟೆಲ್ ನೋಟಿಸ್ ಬೋರ್ಡ್ ಗೆ  ಒಂದು ನೋಟೀಸ್ ಅಂಟಿಸಿದ್ದು ಈಗ ಭಾರಿ ವೈರಲ್ ಆಗಿದೆ. ತುಮಕೂರು ವಿಶ್ವವಿದ್ಯಾಲಯದಲ್ಲಿ ಹಾಸ್ಟೆಲ್ ನಲ್ಲಿ ಪಾಸಾದ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿಯೇ ವಾಸವಿದ್ದು, ಜೊತೆಯಲ್ಲಿ ಅಲ್ಲಿಯೇ ಊಟ ಮಾಡುತ್ತಿದ್ದ ಕಾರಣ ಅವರನ್ನು ಹೊರಹಾಕಲು ಹಾಸ್ಟೆಲ್ ವಾರ್ಡನ್ ಇಲ್ಲಿ ಮೊಸರು ಎಂಜಲು ತಿನ್ನಲು ಬರಬೇಡಿ ಎಂದು ಮುಖಕ್ಕೆ ಹೊಡದ ರೀತಿಯಲ್ಲಿ ನೋಟಿಸ್ ಅಂಟಿಸಿದ್ದಾರೆ. ಈಗ ಆ ನೋಟಿಸ್ ಪತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ‌. ಹಾಸ್ಟೆಲ್ ವಾರ್ಡನ್ ಜಯಶಂಕರ್  ಅವರು ಈ ನೋಟೀಸ್ ಅಂಟಿಸಿದ್ದಾರೆ. ಆದ್ರೆ ಹಾಸ್ಟೆಲ್ ನಲ್ಲಿ ಹೆಚ್ಚಾಗಿ ಬಡ ಮಕ್ಕಳ ಅನಾಥರು ಹಾಸ್ಟೆಲ್ ನಲ್ಲಿ ಇರುತ್ತಾರೆ. ಹೀಗಾಗಿ ಹಾಸ್ಟೆಲ್ ಗೆ ತುತ್ತು ಅನ್ನಕ್ಕಾಗಿ  ಬರುವ ವಿದ್ಯಾರ್ಥಿಗಳಿಗೆ ಅಪಮಾನ ಮಾಡಿದ್ದಾರೆ ಎಂದು ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗಿವೆ.

ಹಿರಿಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇರಬಾರದು. ಮುಸುರೆ ಎಂಜಲು ತಿನ್ನುವುದಕ್ಕಾಗಿ ಇಲ್ಲಿ ಬರಬಾರದು, ಬಾಕ್ಸ್ ಕೊಂಡೊಯ್ಯುವುದು ಸದುದ್ದೇಶದ, ಉತ್ತಮ ವ್ಯವಸ್ಥೆಗೆ ಮಾರಕ ಎಂದು ತುಮಕೂರು ವಿಶ್ವವಿದ್ಯಾಲಯದ ಪಿಜಿ ಹಾಸ್ಟೆಲ್ ವಾರ್ಡನ್ ಜಯಶಂಕರ್ ಅವರು​ ನೋಟಿಸ್​ ಅಂಟಿಸಿದ್ದಾರೆ. ಕಾಲೇಜಿನಲ್ಲಿ ಕೋರ್ಸ್​ ಮುಗಿದಿದ್ದರೂ ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇದನ್ನು ತಡೆಯುವುದಕ್ಕೆ ವಾರ್ಡ​ನ್ ಈ ರೀತಿಯಾಗಿ ಅನಿವಾರ್ಯವಾಗಿ, ನೋಟಿಸ್​ ಅಂಟಿಸಿದ್ದಾರೆ!

ಸೀನಿಯರ್ ವಿದ್ಯಾರ್ಥಿಗಳ ಹಾಸ್ಟೆಲ್ ಅವಧಿ ಹಾಗೂ ಕೋರ್ಸ್ ಮುಗಿದಿದ್ದರೂ, ಪ್ರತಿದಿನ ಹಾಸ್ಟೆಲ್​ಗೆ ಬಂದು ಊಟ ತಿನ್ನುವುದು ಹಾಗೂ ಬಾಕ್ಸ್​ಗಳಿಗೆ ಹಾಕಿಕೊಂಡು ಹೋಗುತ್ತಿದ್ದರು. ಈ ಕುರಿತಾಗಿ, ಮುಸುರೆ ಮತ್ತು ಎಂಜಲು ತಿನ್ನಲು ಬರಬೇಡಿ. ಈ ಮೂಲಕ ಎಲ್ಲಾ ಸೀನಿಯರ್ ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ, ಯಾವುದೇ ಕಾರಣಕ್ಕೂ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ ಇರಬಾರದು. ಮುಸುರೆ ಮತ್ತು ಎಂಜಲು ತಿನ್ನಲು ಬರಬಾರದು. ಅನವಶ್ಯಕವಾಗಿ ಬಾಕ್ಸ್ ತೆಗೆದುಕೊಂಡೊಯ್ಯುವುದು ಉತ್ತಮ ವ್ಯವಸ್ಥೆಗೆ ಮಾರಕವಾಗಿದೆ. ವಿದ್ಯಾರ್ಥಿಗಳು ಇದನ್ನ ನಿಲ್ಲಿಸಬೇಕೆಂದು ತಿಳಿಸಲಾಗಿದೆ ಎಂದು ಹಾಸ್ಟೆಲ್​ ವಾರ್ಡನ್ ಜಯಶಂಕರ್ ಸೂಚನಾ ಫಲಕ ಅಂಟಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply