ತಪ್ಪಿಸಿಕೊಂಡು ಹೋದ್ರು ಬಿಡಲಿಲ್ಲಾ, ಎಳೆದು ತಂದು ಕೇಸ್ ಸಹ ಹಾಕಿದ್ರು….

0

ಕಲಬುರಗಿ  – ಕೋವಿಡ್ ಕೇರ್ ಸೆಂಟರ್ ನಿಂದ ರಾತ್ರೋರಾತ್ರಿ ಎಂಟು ಜನ ಸೋಂಕಿತರು ಎಸ್ಕೇಪ್ ಆಗಿರುವ ಘಟನೆ, ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಕುಂಟು‌ನೆಪ ಹೇಳಿಕೊಂಡು ಕೋವಿಡ್ ಕೇರ್ ಸೆಂಟರ್ ನಿಂದ ಹೊರಬಂದ ೮ ಜನರು ಎಸ್ಕೇಪ್ ಆಗಿದ್ದಾರೆ.  ಕಲಬುರಗಿ ಜಿಲ್ಲೆಯ ಅಫಜಲಪುರ್ ತಾಲೂಕಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹೋಮ್ ಐಸೋಲೇಶನ್ ನಿಂದಾಗಿ ಸೋಂಕು ಹೆಚ್ಚಳ ವಾದ ಹಿನ್ನೆಲೆಯಲ್ಲಿ ಸರ್ಕಾರ ಕಡ್ಡಾಯವಾಗಿ ಸೋಂಕಿತರು ಕೋವಿಡ್ ಕೇರ್ ನಲ್ಲಿ ಚಿಕಿತ್ಸೆ ಪಡೆಯುವುದನ್ನು ಕಡ್ಡಾಯ ಮಾಡಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಬಂದ್ರೆ ಮನೆಯಲ್ಲಿ ಹೋಂ ಐಸೋಲೇಷನ್ ಕಷ್ಟ ಅಂತ ಅವರನ್ನು ಕೇರ್ ಸೆಂಟರ್ ಗೆ ತರಲಾಗುತ್ತಿದೆ.

ಈ ಮೂಲಕ ಅವರ ಮನೆಯವರಿಗೆ ಹರಡಬಹುದಾದ ಸೋಂಕು ತಡೆಯಲು ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದೆ. ಆದರೆ ದಾಖಲಾದ ದಿನವೇ ಮೂರ್ಛೆ ರೋಗ ಸೇರಿದಂತೆ ಇಲ್ಲ ಸಲ್ಲದ ಕುಂಟು ನೆಪೆ ಹೇಳಿಕೊಂಡು ಸುನಾರು ೮ ಜನರು ಕಾರಣ ಹೇಳಿ ಎಸ್ಕೇಪ್ ಆಗಿದ್ದರು. ಈಗ ಅವರನ್ನು ಹುಡುಕಿ ಮತ್ತೆ‌ಕೋವಿಡ್ ಕೇರ್ ಸೆಂಟರ್ ಗೆ ತಂದು ಬಡಲಾಗಿದ್ದು, ಜೊತೆಯಲ್ಲಿ ಅವರ‌ ವಿರುದ್ಧ ಪ್ರಕರಣ ಸಹ ದಾಖಲಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply