ಬಳ್ಳಾರಿ- ನಾಳೆ ಸಾರಿಗೆ ನೌಕರರ ಮುಷ್ಕರ ಕರೆ ನೀಡಿರುವ ಹಿನ್ನೆಲೆಯಲ್ಲಿ, ಅನಿರ್ದಿಷ್ಟ ಅವದಿ ವರೆಗೆ ಮುಷ್ಕರ ನಡೆಯಲಿದೆ. ರಾಜ್ಯದ ನಾನಾ ಭಾಗದಲ್ಲಿ ಸಾರಿಗೆ ನೌಕರರು ಈಗಾಗಲೇ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಇತ್ತಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಸಹ ವ್ಯಾಪಕ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ. ಹೀಗಾಗಿ ಗಣಿ ನಾಡು ಬಳ್ಳಾರಿಯಲ್ಲಿ ಸಾರ್ವಜನಿಕರಿಗೆ  ಸಾರಿಗೆ ನೌಕರರ ಬಿಸಿ ತಟ್ಟಲಿದೆ.

ಆದ್ರೆ  ಬಳ್ಳಾರಿ ಸಾರಿಗೆ ಇಲಾಖೆ ಈಗಾಗಲೇ ಬಸ್ ನೌಕರರ ಮುಷ್ಕರವನ್ನು ಎದುರಿಸಲು ಸಿದ್ದತೆ ಮಾಡಿಕೊಂಡಿದ್ದು, ಒಂದು ವೇಳೆ ಸಾರಿಗೆ ನೌಕರರು ಮುಷ್ಕರ ಮಾಡಿದ್ದೇ ಆದಲ್ಲಿ ಖಾಸಗಿ ಬಸ್‌ಗಳನ್ನು ರಸ್ತೆಗಿಳಿಸಲು ಸಿದ್ದತೆ. ಮಾಡಿಕೊಂಡಿದೆ.‌ ಈಗಾಗಲೇ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಸಾರಿಗೆ ಇಲಾಖೆ ಪ್ರಮುಖ ರೂಟ್ ಗಳಿಗೆ ಖಾಸಗಿ ಬಸ್ ಬಿಡುವ ಚಿಂತನೆ ಮಾಡಿದೆ. ಮೇಲಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳು ಬಳ್ಳಾರಿ ಜಿಲ್ಲಾ ಆರ್ ಟಿ ಓ ಅವರಿಗೆ ಬಸ್ ರೂಟ್ ಗಳ ಪಟ್ಟಿ ನೀಡಿದ್ದು, ನಾಳೆ ಸರದಕಾರಿ ಬಸ್ ಗಳ ಓಡಟ ಡೌಟ್ ಎನ್ನಲಾಗಿದೆ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply