ಬಳ್ಳಾರಿ- ಇಂದಿನಿಂದ ಆರಂಭವಾದ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.  ಬಳ್ಳಾರಿ ಜಿಲ್ಲೆಯ ಒಟ್ಟು 11 ಕೇಂದ್ರದಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ‌. ಇತ್ತ ಹೂವಿನ ಹಡಗಲಿ ತಾಲೂಕು ಅಡಳಿತ ಹಾಗೂ ಆರೊಗ್ಯ ಇಲಾಖೆ ವತಿಯಿಂದ ಕೊವಿಡ್-19 ಕೊವಿಶೀಲ್ಡ್ ಲಸಿಕೆಯನ್ನು ಅಕ್ಷತಾ ಕೊವಿಡ್ ವಾರಿಯರ್ ಗೆ ಹಾಕುವ ಮೂಲಕ ಚಾಲನೆ ನೀಡಲಾಯಿತು.

ಪ್ರಧಾನ ಮಂತ್ರಿಗಳ ಕಚೇರಿ ಇಂದ ಚಾಲನೆಗೊಂಡ  ನಂತರ ಹಡಗಲಿ ಸರ್ಕಾರಿ ಸಾರ್ವಜನಿಕ ಅಸ್ಪತ್ರೆಯಲ್ಲಿ  ಬೆಳಿಗ್ಗೆ 11  ಘಂಟೆಗೆ ಹಡಗಲಿ ತಾಲ್ಲೂಕು ತಹಶೀಲ್ದಾರ ವಿಶ್ವಜಿತ್ ಮೆಹ್ತಾ ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಆರೊಗ್ಯ ಅಧಿಕಾರಿ ಡಾ.ಶಿವಕುಮಾರ ಸಾಲಗೆರಿ. ತಾಲೂಕು ಶಸ್ತ್ರಚಿಕಿಸ್ತಕ ಡಾ.ಬಿ.ಶಿವಕುಮಾರ್. ತಾಲೂಕು ನೊಡಲ್ ಅಧಿಕಾರಿ ಈಶ್ವರ್ ದಾಸಪ್ಪನವರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯು.ಹೆಚ್.ಸೊಮಶೇಖರ್, .ಸಿ.ಪಿ.ಐ ರಾಮರೆಡ್ಯಿ ಕೆ. ಹಾಗೂ ಬಿ.ಈ.ಒ ನಾಗರಾಜ್ ಹಾಗೂ ಸಿಬ್ಭಂದಿ ಉಪಸ್ಥಿತಿ ಇದ್ದರು

About Author

Priya Bot

Leave A Reply