ರಸ್ತೆ ಅಗಲೀಕರಣಕ್ಕೆ ಚಾಲನೆ.

0

ರಾಯಚೂರು – ಬಹುದಿನಗಳಿಂದ ನನೆಗುದ್ದಿಗೆ ಬಿದ್ದಿರುವ  ರಾಯಚೂರಿನಲ್ಲಿ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಯಿತು. ನಗರದ ತೀನ್ ಕಂದಿಲ್ ಸರ್ಕಲ್ ‌‌ನಿಂದ ಅಶೋಕ್ ಡಿಪೋದವರೆಗೆ ರಸ್ತೆ ಅಗಲೀಕರಣಕ್ಕೆ ಮಾಡಲು ಹಲವು ದಿನಗಳಿಂದ ನಿರ್ಧಾರಿಸಲಾಗಿತ್ತು. ಆದ್ರೆ ರಸ್ತೆ ಅಗಲೀಕರಣಕ್ಕೆ ಮಾತ್ರ ಆಗಿರಲಿಲ್ಲ‌. ಇಂದು ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್ ಪೂಜೆ ನೇರವೇರಿಸುವ ಮೂಲಕ ಚಾಲನೆ ನೀಡಿದರು.

ನಗರಸಭೆಯಲ್ಲಿ ತಿರ್ಮಾನಿಸಿದಂತೆ ರಸ್ತೆ ಮಧ್ಯಭಾಗದಲ್ಲಿ ಎಡ‌ ಹಾಗೂ ಬಲ ಭಾಗ ಎರಡು ಸೇರಿ ೫೫ ಫೀಟ್ ರಸ್ತೆ ಅಗಲೀಕರಣ ಮಾಡಿ, ರಸ್ತೆ, ಚರಂಡಿ, ಬೀದಿ ದೀಪಗಳ ಆಳವಡಿಕೆ, ಫುಟ್ ಬಾತ್ ಮಾಡಲು ತಿರ್ಮಾನಿಸಲಾಗಿತ್ತು. ಆದ್ರೆ ಕಾಂಪ್ಲೆಕ್ಸ್ ಮಾಲೀಕರು, ಮನೆಯ ಮಾಲೀಕರು 55 ಫೀಟ್‌ ಬದಲಿಗೆ 50 ಫೀಟ್ ಅಗಲೀಕರಣ ಮನವಿ ಮಾಡಿದ್ದರೆ. ಮಾಲೀಕರ ಒತ್ತಾಯದ ಮೆರೆಗೆ ನಗರಸಭೆ ಅಧ್ಯಕ್ಷ ಹಾಗೂ ಸದಸ್ಯರು ಶಾಸಕ ಡಾ.ಶಿವರಾಜ್ ಪಾಟೀಲ್ ಮೂಲಕ ಜಿಲ್ಲಾಧಿಕಾರಿ ಮನವಿ ಮಾಡಲಾಗಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನಲೆಯಲ್ಲಿ 50 ಫೀಟ್ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಯಿತು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply