ಐತಿಹಾಸಿಕ ಮಾವಿನಕೆರೆ ಹೂಳುತ್ತೇವ ಕಾರ್ಯಕ್ಕೆ ಚಾಲನೆ.

0

ರಾಯಚೂರು – ರಾಯಚೂರು ಜಿಲ್ಲೆಯ ಐತಿಹಾಸಿಕ ಮಾವಿನಕರೆ ಅಭಿವೃದ್ದಿಗಾಗಿ ಹೂಳು ಕಾರ್ಯಕ್ಕೆ ಚಾಲನೆ ನೀಡಲಾಯಿತು. ಭಾರತೀಯ ಜೈನ್ ಸಂಘಟನೆ(ಬಿಜೆಎಸ್) ಹಾಗೂ ಶಿಲ್ಪಾ ಮೆಡಿಕೇರ್ ಕಂಪನಿಯಿಂದ ಸಂಯೋಗದಲ್ಲಿ ನಡೆಯುವ ಹೂಳು ಎತ್ತುವ ಕಾರ್ಯಕ್ಕೆ ಪೂಜೆ ನೇರವೇರಿಸುವ ಮೂಲಕ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಚಾಲನೆ ನೀಡಿದ್ರು.

ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮಾವಿನಕರೆ ಒಂದಾಗಿದೆ. ಕರೆಯಲ್ಲಿ ನಗರದ ನಾನಾ ಬಡಾವಣೆಗಳ ಚರಂಡಿ ನೀರು ಸೇರಿಕೊಂಡು ಕಲುಷಿತಗೊಂಡು, ಅಪಾರ ಪ್ರಮಾಣದ ಹೂಳು ತುಂಬಿಕೊಂಡಿದೆ. ಪ್ರವಾಸಿ ತಾಣವನ್ನ ಅಭಿವೃದ್ದಿ ಪಡಿಸಲು ನಗರಾಭಿವೃದ್ದಿ ಪ್ರಾಧಿಕಾರ, ಜಿಲ್ಲಾಡಳಿತದಿಂದ ಯೋಜನೆ ರೂಪಿಸಿತ್ತು. ಇದೀಗ ಬಿಜೆಎಸ್ ಸಹಯೋಗದಲ್ಲಿ ಕೆರೆಯಲ್ಲಿ ಹೂಳು ತೆಗೆಯಲು ಮುಂದಾಗಿದೆ.

ಮಾವಿನಕೆರೆ ಕಲುಷಿತ ನೀರು ತುಂಬಿಕೊಂಡು ಸುತ್ತಮುತ್ತಲಿನ ವಾಸಿಸುವ ಪ್ರದೇಶಿಗಳಿಗೆ ದುರ್ವಾಸನೆ ಹರಡುತ್ತಿತ್ತು. ಇದರಿಂದ ಜನರ ರೋಸಿ ಹೋಗಿದ್ರು. ಇದು ಅಲ್ಲದೇ ಆಗಾಗ ಹೂಳುಗಳು ಕಾಣಿಸಿಕೊಳ್ಳುವ ಮೂಲಕ ಮಾವಿನಕರೆ ಮೇಲೆ ಸಂಚಾರಿಸುವವರಿಗೆ ಸವಾರರಿಗೆ ತೊಂದರೆ ಉಂಟಾಗುತ್ತಿತ್ತು. ಇದೀಗ ಬೃಹತ್ ಹಿಟಾಚಿಗಳನ್ನ ಬಳಸಿಕೊಂಡು ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿರುವುದು ಸುತ್ತಮುತ್ತಲಿನ ಜನರಿಗೆ ನೆಮ್ಮದಿ ತರಿಸಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply