ಧಾರವಾಡ- ಧಾರವಾಡ ಜಿಲ್ಲೆಯಲ್ಲಿ ಸದ್ಯಕ್ಕೆ ಬ್ಲಾಕ್ ಫಂಗಸ್ ಔಷಧಿಯ ಕೊರತರಯಿದೆ. ಬೇರೆ ಜಿಲ್ಲೆಗಳ ರೋಗಿಗಳು ಹೆಚ್ಚಾಗಿ ಬಂದಿರೋದ್ರಿಂದ ಸಮಸ್ಯೆಯಾಗಿದೆ ಎಂದು ಡಿಸಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಸದ್ಯ ಕಿಮ್ಸ್ ನಲ್ಲಿ ಬ್ಲಾಕ್ ಫಂಗಸ್ ಗೆ ಗುರಿಯಾದ 96 ಜನರಿಗೆ ಚಿಕಿತ್ಸೆ ನೀಡಲಾಗ್ತಿದೆ. 20 ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇವತ್ತು 100 ವಯಲ್ಸ್ ಔಷಧಿ ಬರೋದಿದೆ.

ಖಾಸಗಿಯಾಗಿಯೂ ಕಿಮ್ಸ್ ವತಿಯಿಂದ ದುಡ್ಡು ಕೊಟ್ಟು ಖರೀದಿಗೆ ಪ್ರಯತ್ನಿಸಲಾಗಿದೆ. ಹಿಂದೆ 700 ರಲ್ಲಿ 55 ವಯಲ್ಸ್ ಕಿಮ್ಸ್ ಗೆ ಬಂದಿತ್ತು. ಬೇರೆ ಜಿಲ್ಲೆಯಲ್ಲಿ ಇರೋ ಔಷಧಿಯನ್ನು ಡೈವರ್ಟ್ ಮಾಡಿಕೊಳ್ಳಲಾಗುತ್ತಿದೆ. ನಮ್ಮ ಜಿಲ್ಲೆಯ ರೋಗಿಗಳ ಸಂಖ್ಯೆ ಕಡಿಮೆ ಇದೆ ಬೇರೆ ಜಿಲ್ಲೆಯ ಸೋಂಕಿತರ ಸಂಖ್ಯೆ ಹೆಚ್ಚಿದೆ. ತಾರತಮ್ಯವಿಲ್ಲದೆ ಬೇರೆ ಜಿಲ್ಲೆಗಳಿಂದ ಬಂದವರಿಗೂ ಚಿಕಿತ್ಸೆ ಕೊಡುತ್ತಿರೋದಾಗಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Bot

Leave A Reply