ಉಡುಪಿ- ಇತ್ತೀಚಿನ ದಿನಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಕೇವಲ ಯೂಟ್ಯೂಬ್, ಹಾಗೂ ವೆಬ್ ಪೇಜ್ ಮಾಡಿಕೊಂಡು ಜನರಿಗೆ ಅಧಿಕಾರಗಳನ್ನು ಹೆದರಿಸಿಕೊಂಡು ಅವರಿಂದ ಹಣ ವಸೂಲಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ವೆಬ್ ಪೇಚ್ ನ ಹೆಸರು ಹೇಳಿಕೊಂಡು ನಕಲಿ ಪತ್ರಕರ್ತರಿಗೆ ಈಗ ಸಕ್ಕತ್ ಗೂಸಾ ಬಿದ್ದಿದೆ. ಉಡುಪಿ ನಗರದ‌ ಮಲ್ಪೆ ಸಮೀಪದ ರೆಸಾರ್ಟ್ ಮಾಲೀಕರಿಗೆ ಕಳೆದ ಒಂದು ತಿಂಗಳಿಂದ ಈ ನಕಲಿ ಪತ್ರಕರ್ತರು ದುಡ್ಡು ಕೊಡುವಂತೆ ಬೇಡಿಕೆ ಇಟ್ಟಿದ್ದರು.  ಆದ್ರೆ ಇವರ ಕಿರುಕುಳಕ್ಕೆ ಬೇಸತ್ತಿದ್ದ ರೆಸಾರ್ಟ್ ಮಾಲೀಕರು ಇಂದು ಬೆಳಗಿನ ಜಾವ ನಕಲಿ ಪತ್ರಕರ್ತರನ್ನು ರೆಸಾರ್ಟ್ ಹಣ ಕೊಡುವುದಾಗಿ ಕರೆದಿದ್ದಾರೆ . ಅದನ್ನು ನಂಬಿದ ನಕಲಿ ಪತ್ರಕರ್ತರು  ರೆಸಾರ್ಟ್ ಗೆ ಹೋಗಿದ್ದಾರೆ. ಆಗ ರೆಸಾರ್ಟ್ ಮಾಲೀಕರು ಸೇರಿದಂತೆ ಅಲ್ಲಿ ಕೆಲಸ ಮಾಡುತಿದ್ದ ಅನೇಕರು ನಕಲಿ ಪತ್ರಕರ್ತರಿಗೆ ಹಿಗ್ಗಾ ಮುಗ್ಗಾ ತಳಿಸಿದ್ದಾರೆ. ಅಲ್ಲಿಂದ ಕಾಲುಕಿತ್ತ ಅವರು ಮನೆ ದಾರಿ ಹಿಡಿದಿದ್ದಾರೆ. ಆಗ ಬಿಡದೆ ಅವರನ್ನು ಅಲ್ಲಿನ ಕೆಲಸಗಾರರು ಹಿಂಬಾಲಿಸಿಕೊಂಡ ಬಂದ ಗೂಸಾ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ ಬಳಿಕ ಜಗಳ ಅಂತ್ಯವಾಗಿದೆ. ಈ ಸಂಭಂದ ಯಾವುದೇ ಪ್ರಕರಣ ದಾಖಲಾಗಿಲ್ಲಾ ಎಂದು ತಿಳಿದುಬಂದಿದೆ…

About Author

Priya Bot

Leave A Reply