ಬೆಳಗಾವಿ- ಕುಂದಾ ನಗರಿ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 18 ಜನ ಶಿಕ್ಷಕರಿಗೆ ಕರೋನಾ ಸೋಂಕು ಇರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ವಿದ್ಯಾಗಮ ಯೋಜನೆ ಜಾರಿಯಾದ ಕೇವಲ ಮೂರೇ ದಿನಕ್ಕೆ ಶಿಕ್ಷಕರಲ್ಲಿ ಸೋಂಕು ಇರುವುದು ಜನರಲ್ಲಿ ಆತಂಕ ಮೂಡಿಸಿದೆ. ಸರ್ಕಾರದ ಆದೇಶದಂತೆ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲೆಯ ಸುಮಾರು 7 ಸಾವಿರ ಶಿಕ್ಷಕರಿಗೆ ಕೊರೊನಾ ಸೋಂಕಿನ ಪರೀಕ್ಷೆ ಮಾಡಲಾಗಿತ್ತು. ಇಂದು  ಕರೋನಾ ವರದಿ ಬಂದಿದೆ.

ಇದರಲ್ಲಿ ಬೆಳಗಾವಿ ನಗರ‌ 4, ಬೆಳಗಾವಿ ಗ್ರಾಮೀಣ 10, ರಾಮದುರ್ಗ ಕಿತ್ತೂರಿನಲ್ಲಿ ತಲಾ ಒಬ್ಬರಿಗೆ ದೃಡಪಟ್ಟಿದೆ. ಇನ್ನೂ 7 ಸಾವಿರ ಶಿಕ್ಷಕರಲ್ಲಿ 3 ಸಾವಿರ ಶಿಕ್ಷಕರ ವರದಿ ಬರುವುದು ಬಾಕಿ ಇದೆ ಹೀಗಾಗಿ ಸೋಂಕಿನ ಪ್ರಮಾಣದಲ್ಲಿ ಏರಿಕೆ ಆಗುವ ಸಾದ್ಯತೆ ಇದೆ ಎಂದು ಹಳಲಾಗಿದೆ. ಬೆಳಗಾವಿಯ ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೋಡಿಯಲ್ಲಿ 4 ಜನ ಶಿಕ್ಷಕರಿಗೆ ಸೋಂಕು ದೃಡವಾಗಿದೆ. ಶೈಕ್ಷಣಿಕ ಜಿಲ್ಲೆಯ ಒಟ್ಟು 10 ಸಾವಿರ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಸುಮಾರು 5 ಸಾವಿರ ಶಿಕ್ಷಕರ ವರದಿ ಬರುವುದು ಬಾಕಿ ಇದೆ…

Leave A Reply