ಬೆಂಗಳೂರು- ಭಾರತೀಯ ಜನತಾ ಪಾರ್ಟಿ  ಎಸ್ಸಿ ಮೋರ್ಚಾದ ರಾಜ್ಯ ಅಧ್ಯಕ್ಷರಾದ ಮಾನ್ಯ ಚಲವಾದಿ ನಾರಾಯಣಸ್ವಾಮಿ ಅವರು ಬಳ್ಳಾರಿ ಜಿಲ್ಲೆ ಸೊಂಡೂರಿನ ಶ್ರೀ ಎಫ್ ಕುಮಾರ್ ನಾಯ್ಕ  ಇವರನ್ನು ರಾಜ್ಯ ಕಾರ್ಯಕಾರಣಿ ಸದಸ್ಯರನ್ನಾಗಿ ನೂತನವಾಗಿ ಆಯ್ಕೆ ಮಾಡಿ ಆದೇಶವನ್ನು ಹೊರಡಿಸಿದ್ದಾರೆ. ಆಯ್ಕೆ ಮಾಡಲು ಸಹಕರಿಸಿದ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆನಂದ್ ಸಿಂಗ್, ಸಂಸದರಾದ ವೈ ದೇವೇಂದ್ರಪ್ಪ, ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ ಪಾಟೀಲ್, ವಿಭಾಗ ಪ್ರಭಾರಿ ಗಳಾದ ಸಿದ್ದೇಶ್ ಯಾದವ್, ಸಹ-ಪ್ರಭಾರಿ ಗಳಾದ ನೇಮಿರಾಜ್ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ಅನಿಲ್ ಕುಮಾರ್ ಮೋಕ, ಹಾಗೂ ಪಕ್ಷದ ಹಿರಿಯ ಮುಖಂಡರು ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು  ಕುಮಾರ್ ನಾಯ್ಕ  ಅವರು ಸಲ್ಲಿಸಿದ್ದಾರೆ

Leave A Reply